ಖಾದಿ ಟ್ರೇಡ್​​ಮಾರ್ಕ್​​ ಬಳಸೋರಿಗೆ ಬಿಗ್ ಶಾಕ್!

masthmagaa.com:

ಖಾದಿ ಹೆಸರು ಹೇಳಿಕೊಂಡು ಅದೆಷ್ಟೋ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡ್ತಿವೆ. ಆದ್ರೆ ಇನ್ಮುಂದೆ ಹೀಗಾಗಲ್ಲ. ಯಾಕಂದ್ರೆ ಇಂಟರ್​ನೆಟ್​ ಡೊಮೇನ್​ ವಿವಾದಕ್ಕೆ ಸಂಬಂಧಿಸಿದ The National Internet Exchange of India Domain Dispute Policy (INDRP) ಅನ್ನೋ ನ್ಯಾಯಾಧೀಕರಣ ಈ ಬಗ್ಗೆ ಮಹತ್ವದ ತೀರ್ಪು ನೀಡಿದೆ. ಖಾದಿ ಅನ್ನೋದು ಒಂದು ಸಾಮಾನ್ಯ ಹೆಸರಲ್ಲ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಖಾದಿ ಮತ್ತು ಖಾದಿ ಇಂಡಿಯಾ ಅನ್ನೋ ಪದಗಳ ಟ್ರೇಡ್​​ಮಾರ್ಕ್​ ಹೊಂದಿದೆ ಅಂತ ಸ್ಪಷ್ಟಪಡಿಸಿದೆ. ಈ ಹೆಸರನ್ನು ಬೇರೆ ಕಂಪನಿಗಳು ಬಳಸಿದ್ರೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಹೆಸರಲ್ಲಿ ಮೋಸ ಮಾಡಿದಂತೆ ಆಗುತ್ತೆ ಅಂತ ಅಭಿಪ್ರಾಯ ಪಟ್ಟಿದೆ. ದೆಹಲಿಯ ಉದ್ಯಮಿಯೊಬ್ಬರ ಖಾದಿ ಡಾಟ್ ಇನ್ ಅನ್ನೋ ಡೊಮೇನ್​​ ವಿರುದ್ಧ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಅರ್ಜಿ ಸಲ್ಲಿಸಿತ್ತು.

-masthmagaa.com

Contact Us for Advertisement

Leave a Reply