ಚೀನಾ ಮಿಲಿಟರಿ ಪವರ್ ಹೆಚ್ಚಳ ಜಗತ್ತಿಗೆ ಆತಂಕ: ಟ್ರಂಪ್

ಚೀನಾದ ಸೇನಾ ಸಾಮಥ್ರ್ಯ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚೀನಾ ದೇಶವು ಇಡೀ ಜಗತ್ತಿಗೇ ಬೆದರಿಕೆಯಾಗಿದೆ ಎಂದಿದ್ದಾರೆ. ಚೀನಾ ರಕ್ಷಣಾ ಪಡೆಗೆ ಶೇಕಡ 7ರಷ್ಟು ಅಂದ್ರೆ 152 ಬಿಲಿಯನ್ ಡಾಲರ್ ಅಂದ್ರೆ 10.82 ಲಕ್ಷ ಕೋಟಿ ಹೆಚ್ಚು ಖರ್ಚು ಮಾಡಿದೆ ಎಂದಿದ್ದಾರೆ. ಇತರ ಯಾವುದೇ ದೇಶಕ್ಕಿಂತಲೂ ಚೀನಾವು ಸೇನೆಯನ್ನು ವೇಗವಾಗಿ ಬಲಪಡಿಸುತ್ತಿದ್ದು, ಅದಕ್ಕೆ ಅಮೆರಿಕದ ಹಣವನ್ನು ಬಳಸಲಾಗುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಅಲ್ಲದೆ ಬರಾಕ್ ಒಬಾಮಾ ವಾರ್ಷಿಕ 500 ಬಿಲಿಯನ್ ಅಂದ್ರೆ 35.59 ಲಕ್ಷ ಕೋಟಿ ಡಾಲರ್ ವೆಚ್ಚಕ್ಕೆ ಅನುವು ಮಾಡಿಕೊಟ್ಟಿದ್ದರು. ಅವರು ಅಮೆರಿಕದ ಬೌದ್ಧಿಕ ಹಕ್ಕು ಸ್ವಾಮ್ಯ ಮತ್ತು ಆಸ್ತಿ ಹಕ್ಕುಗಳನ್ನು ಕದಿಯಲು ಅವಕಾಶ ನೀಡಿದ್ದರು. ಆದ್ರೆ ನಾನು ಹಾಗೆ ಮಾಡಲ್ಲ ಎಂದಿದ್ದಾರೆ. ಅಲ್ಲದೆ ಅಂತಿಮ ಕ್ಷಣದಲ್ಲಿ ಚೀನಾ ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ಚೀನಾದೊಡನೆ ವ್ಯಾಪಾರ ಒಪ್ಪಂದ ವಿಫಲವಾಯ್ತು ಅಂತ ಬೇಸರ ವ್ಯಕ್ತಪಡಿಸಿದರು.

Contact Us for Advertisement

Leave a Reply