ಉತ್ತರ ಪ್ರದೇಶ ರಾಜಕೀಯದ ಕಂಪ್ಲೀಟ್ ಅಪ್​ಡೇಟ್​​!

masthmagaa.com:

ಮುಂಬರುವ ಎಲೆಕ್ಷನ್​​ನಲ್ಲಿ 66 ಪರ್ಸೆಂಟ್ ಟಿಕೆಟ್​​ನ್ನು ಅಲ್ಪಸಂಖ್ಯಾತರಿಗೆ ನೀಡ್ತಿದ್ದೀವಿ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಬಿಜೆಪಿ ಸರ್ಕಾರ ಮಾತ್ರವಲ್ಲ.. ಪಕ್ಷ ಕೂಡ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುತ್ತೆ.. ಈ ಸಲ ಎಲೆಕ್ಷನ್​​ನಲ್ಲಿ 66 ಪರ್ಸೆಂಟ್​​ನಷ್ಟು ಟಿಕೆಟ್​ನ್ನು ಅಲ್ಪಸಂಖ್ಯಾತರಿಗೆ ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ.

ಬಿಜೆಪಿ ಮೈತ್ರಿ ಪಕ್ಷ ಅಪ್ನಾದಳ್ ಕೂಡ ತನ್ನ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ. ಆ ಮೊದಲ ಟಿಕೆಟ್ಟನ್ನು ರಾಂಪುರ ಜಿಲ್ಲೆಯ ಸುಆರ್ ಕ್ಷೇತ್ರದಿಂದ ಹೈದರ್ ಅಲಿ ಖಾನ್​​​ಗೆ ನೀಡಿದೆ.

ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್ ಸಿಂಗ್ ಸಮಾಜವಾದಿ ಪಕ್ಷ ಸೇರಿದ್ದಾರೆ. ಉತ್ತರ ಪ್ರದೇಶದ ಪ್ರತಾಪ್​ಘರ್ ಮೂಲದ ಇವರು 8.1 ಅಡಿ ಎತ್ತರ ಇದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ನಾನೇ ಅಂತ ಇನ್​ಡೈರೆಕ್ಟಾಗಿ ಹೇಳಿಕೊಂಡಿರೋ ಪ್ರಿಯಾಂಕಾ ವಾದ್ರಾಗೆ ಬಿಎಸ್​​ಪಿ ಅಧಿನಾಯಕಿ ಮಾಯಾವತಿ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಬಿಜೆಪಿಯೇತರ ವೋಟ್ ಬ್ಯಂಕ್ ಒಡೆಯೋದು ಬಿಟ್ಟು ಬೇರೇನೂ ಮಾಡಲ್ಲ. ಹೀಗಾಗಿ ಎಲ್ಲರೂ ಬಿಎಸ್​​ಪಿಗೆ ಓಟ್ ಹಾಕಿ ಅಂತ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದ್ರೆ, ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ನಾಯಕ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply