ಒಪ್ಪಂದಗಳಿಗೆ ಬದ್ದವಾಗಿರದಿದ್ರೆ ನಾವು ನಿಮಗೆ ನ್ಯಾಟೋ ಬಾಗಿಲು ಓಪನ್‌ ಆಗಲ್ಲ: ಟರ್ಕಿ

masthmagaa.com:

ನ್ಯಾಟೋ ಸೇರೋಕೆ ಇರೋ ಬರೋ ವಿಘ್ನಗಳನ್ನ ದಾಟಿ ಇನ್ನೇನು ನಾವು ಒಳಗೇ ಸೇರಾಯ್ತು ಅನ್ನೋ ಖುಷಿಯಲ್ಲಿದ್ದ ಫಿನ್‌ಲ್ಯಾಂಡ್‌ ಹಾಗೂ ಸ್ವೀಡನ್‌ಗಳಿಗೆ ಟರ್ಕಿ ಮತ್ತೆ ಎಚ್ಚರಿಕೆ ಕೊಟ್ಟಿದೆ. ಟರ್ಕಿ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ನಡೆದುಕೊಳ್ಳಲಿಲ್ಲ ಅಂದ್ರೆ ಖಂಡಿತಾ ನಾವು ನಿಮ್ಮನ್ನ ನ್ಯಾಟೋ ಸೇರೋಕೆ ಬಿಡೋದಿಲ್ಲ ಅಂತ ಹೇಳಿದೆ. ಸ್ಪೇನ್‌ನಲ್ಲಿ ನಡೆದ ನ್ಯಾಟೋ ದೇಶಗಳ ಕೊನೇ ಸಭೆಯಲ್ಲಿಈ ಬಗ್ಗೆ ಮಾತನಾಡಿರೋ ಟರ್ಕಿ ಅಧ್ಯಕ್ಷ ರಿಸೀಪ್‌ ತಾಯಿಪ್‌ ಎರ್ಡೋಗನ್‌ ನ್ಯಾಟೋ ಸೇರೋಕೆ ಫಿನ್‌ಲ್ಯಾಂಡ್‌ ಹಾಗೂ ಸ್ವೀಡನ್‌ ದೇಶಗಳು ಟರ್ಕಿಯ ಈಡೇರಿಕೆಗಳನ್ನ ಪೂರೈಸಲಿಲ್ಲ ಅಂದ್ರೆ ಒಪ್ಪಂದದ ಪ್ರಕಾರ ನಡೆದುಕೊಳ್ಳಲಿಲ್ಲ ಅಂದ್ರೆ ನಾವು ಖಂಡಿತಾ ಅವರು ನ್ಯಾಟೋ ಸೇರೋದನ್ನ ತಡೆಹಿಡಿಯಬಹುದು ಅಂತ ಹೇಳಿದ್ದಾರೆ. ಅಂದ್ಹಾಗೆ ಟರ್ಕಿಯ ನಿದ್ದೆಗೆಡಿಸಿರೋ ಪ್ರತ್ಯೇಕತಾ ಗುಂಪು ಕುರ್ದಿಷ್‌ ಪಡೆ ನಾರ್ಡಿಕ್‌ ದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಫಿನ್ ಲ್ಯಾಂಡ್‌, ಸ್ವೀಡನ್‌ಗಳಲ್ಲಿ ನೆಲೆ ಕಂಡು ಕೊಂಡಿವೆ. ಹಾಗಾಗಿ ಅವರನ್ನ ನಿಮ್ಮ ದೇಶದಲ್ಲಿ ಇರಿಸಿಕೊಳ್ಳಬಾರ್ದು..ಅವರಿಗೆ ಸಹಾಯ ಮಾಡ್ಬಾರ್ದು ಅನ್ನೋದು ಈ ಟರ್ಕಿಯ ವಾದ. ಆ ಕಾರಣದಿಂದ ಈಗ ಟರ್ಕಿ ಅವರನ್ನ ನ್ಯಾಟೋ ಸೇರೋಕೆ ಬಿಡ್ತಾಯಿಲ್ಲ. ಆಗಿದ್ರೂ ಅಮೆರಿಕ ಹಾಗೂ ಯುರೋಪ್‌ನ ಮಾತುಕತೆಯ ಫಲದಿಂದ ಕಳೆದ ಎರಡ್ಮೂರು ದಿನಗಳ ಹಿಂದೆಯಷ್ಟೇ ನಾವು ಅವರನ್ನ ಗುಂಪಿಗೆ ಸೇರಿಸಿಕೊಳ್ಳೋಕೆ ಒಪ್ಪಿಕೊಳ್ತೀವಿ ಅಂತ ಹೇಳಿತ್ತು. ಈಗ ಹೊಸದಾಗಿ ಮತ್ತೆ ಅದೇ ರಾಗ ಹಾಡಿದೆ.

-masthmagaa.com

Contact Us for Advertisement

Leave a Reply