ಭೂಕಂಪನದ ಅವಶೇಷದ ಅಡಿಯಲ್ಲಿ ಸಿಕ್ಕಿತು ನವಜಾತ ಶಿಶು! ಹಾಲುಣಿಸಿದ ಡಾಕ್ಟರ್‌ ಪತ್ನಿ!

masthmagaa.com:

ಟರ್ಕಿ ಹಾಗೂ ಸಿರಿಯಾದ ಭೂಕಂಪದಲ್ಲಿ ಇದುವರೆಗೂ ಸಾವೀಗೀಡಾದವರ ಸಂಖ್ಯೆ 37 ಸಾವಿರಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 56ಸಾವಿರ ದಾಟಬೋದು ಅಂತ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇತ್ತ ಸಿರಿಯಾದಲ್ಲಿ ಭೂಕಂಪವಾಗಿ ವಾರ ಕಳೆದರೂ ಪವಾಡ ಅನ್ನೋ ಹಾಗೇ ನವಜಾತ ಹೆಣ್ಣು ಮಗು ಒಂದು ಬದುಕಿ ಉಳಿದಿದೆ. ಈ ಪುಟ್ಟ ಮಗುವಿನ ಕುಟುಂಬದ ಎಲ್ಲಾ ಸದಸ್ಯರು ಮನೆಯ ಅವಶೇಷಗಳಡಿಯಲ್ಲಿ ಸಿಕ್ಕಿ ಸಾವನ್ನಪ್ಪಿದ್ದಾರೆ. ಆದ್ರೆ ಮಗು ಆರೋಗ್ಯವಾಗಿದ್ದು, ಆಕೆಯನ್ನು ನೋಡಿಕೊಳ್ಳುತ್ತಿರುವ ಆಸ್ಪತ್ರೆಯ ಡೈರೆಕ್ಟರ್‌ ಹೆಂಡತಿಯೇ ಮಗುವಿಗೆ ಹಾಲುಣಿಸಿ ಮಾನವೀಯತೆ ಮರೆದಿದ್ದಾರೆ. ಅಲ್ದೇ ಆ ಮಗುವಿಗೆ ಆಯಾ ಅಂತ ಹೆಸರಿಡಲಾಗಿದೆ. ಅಂದ್ರೆ ಅರೇಬಿಕ್‌ ಭಾಷೆಯಲ್ಲಿ ದೇವರ ಸಂಕೇತ ಅಂತ ಅರ್ಥ. ಇನ್ನು ಈ ಕಡೆ ಭಾರತೀಯ ರಕ್ಷಣಾ ತಂಡಗಳು ಆಪರೇಶನ್‌ ದೋಸ್ತ್‌ ಹೆಸರಲ್ಲಿ ಕಾರ್ಯಚರಣೆ ಮಾಡ್ತಿದ್ದು, ಎನ್‌ಡಿಆರ್‌ಎಫ್‌ ತಂಡದ ಜೊತೆಗೆ ಭಾರತದ ಶ್ವಾನದಳ ಸಹ ಫೀಲ್ಡೀಗಿಳಿದಿವೆ. ಇದೀಗ ರೋಮಿಯೋ ಹಾಗೂ ಜೂಲಿ ಅನ್ನೋ ಎರಡು ಶ್ವಾನಗಳು ಅವಶೇಷಗಳಡಿಯಲ್ಲಿ ಸಿಕ್ಕಿರೋ ಇಬ್ರು ಹುಡುಗಿಯರನ್ನ ಪತ್ತೆ ಹಚ್ಚಿವೆ. ಭಾರತೀಯ ಯೋಧರು ತಾತ್ಕಲಿಕ ಆಸ್ಪತ್ರೆಗಳನ್ನ ನಿರ್ಮಾಣ ಮಾಡಿ ಚಿಕಿತ್ಸೆ ಕೊಡುವ ಕೆಲಸವನ್ನ ಸಹ ಮುಂದುವರೆಸಿದ್ದಾರೆ. ಇನ್ನು ಈ ಕಡೆ ಸಿರಿಯಾದಲ್ಲಿ ರಕ್ಷಣಾ ಕಾರ್ಯಚರಣೆ ಮಾಡೋಕೆ ನಾವು ಹೊಸದಾಗಿ 300 ಸೈನಿಕರನ್ನ ಕಳುಹಿಸಿಕೊಡಲಿದ್ದೇವೆ ಅಂತ ರಷ್ಯಾ ಅನೌನ್ಸ್ ಮಾಡಿದೆ. ಇದೆಲ್ಲಾದ್ರ ಜೊತಗೆ ಈ ಎರಡೂ ದೇಶಗಳಗಳಲ್ಲಿ ವಿಪರೀತ ಚಳಿ ಕೆಲವು ಭಾಗದಲ್ಲಿ ಮೈನಸ್‌ 10ರ ಕನಿಷ್ಠ ತಾಪಮಾನ ಕೂಡ ದಾಖಲಾಗಿದೆ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಪ್ರಕೃತಿಯೇ ಅತಿದೊಡ್ಡ ಸವಾಲು ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply