ಟರ್ಕಿಯ ಭೀಕರ ಭೂಕಂಪದಲ್ಲಿ ಕಾಣೆಯಾದ ಕನ್ನಡ ನಾಡಿನ ಉದ್ಯೋಗಿ!

masthmagaa.com:

ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪಕ್ಕೆ ಸಿಲುಕಿ ಸಾವೀಗೀಡಾದವರ ಸಂಖ್ಯೆ ಕನಿಷ್ಠ 16 ಸಾವಿರ ದಾಟಿದೆ. ಆ ಪೈಕಿ 13 ಸಾವರಿ ಮಂದಿ ಟರ್ಕಿಯವರಾದ್ರೆ ಇನ್ನುಳಿದಂತೆ 3 ಸಾವಿರಕ್ಕಿಂತ ಹೆಚ್ಚಿನ ಜನ ಸಿರಿಯಾಗೆ ಸೇರಿದವರು ಅಂತ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಈ ಎರಡೂ ದೇಶಗಳಲ್ಲಿ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದ್ದು ಆ ಕಡೆ ವಿಶ್ವಸಂಸ್ಥೆ ಕೂಡ ಈಗಾಗಲೇ 20 ಸಾವಿರ ಮಂದಿ ಸಾವೀಗೀಡಾರೋ ಸಾದ್ಯತೆಯನ್ನ ಲೆಕ್ಕಾಹಾಕಿದೆ. ಈ ಕಡೆ ಭಾರತ ಸೇರಿ ಅನೇಕ ದೇಶಗಳು ರಕ್ಷಣಾ ಕಾರ್ಯಾಚರಣೆಯನ್ನ ಮುಂದುವರೆಸಿವೆ.ಈಗಾಗಲೇ ಅನೇಕ ಬಾರಿ ಟರ್ಕಿ ದೇಶಕ್ಕೆ ಭಾರತ ಸಿ-17 ಮಿಲಿಟರಿ ವಿಮಾನಗಳ ಮೂಲಕ ರಕ್ಷಣಾ ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಇದರಲ್ಲಿ ಎನ್​ಡಿಎಆರ್​ಎಫ್​ನ ರಕ್ಷಣಾ ತಜ್ಞರು, ಶ್ವಾನ ದಳ ಮೊದಲಾದವು ಸೇರಿವೆ. ಈಗ ಭಾರತದಿಂದ ಮತ್ತೊಂದು ಸಿ-17 ಫ್ಲೈಟ್ ಮೂಲಕ ಟರ್ಕಿಗೆ ಬ್ಯಾಚ್ ರವಾನೆಯಾಗಲಿದೆ ಅಂತ ಸರ್ಕಾರದ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಇತ್ತ ಟರ್ಕಿ ದೇಶದಲ್ಲಿ ಸುಮಾರು 3 ಸಾವಿರದಷ್ಟು ಭಾರತೀಯರು ವಾಸವಿದ್ದು ಈ ಪೈಕಿ ಬೆಂಗಳೂರಿನ ಒಬ್ಬ ವ್ಯಕ್ತಿ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಈ ಕಾಣೆಯಾಗಿರೋ ವ್ಯಕ್ತಿ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಅಂತ ಹೇಳಲಾಗ್ತಿದೆ. ನಾಪತ್ತೆಯ ವಿಷಯವನ್ನ ಭಾರತದ ವಿದೇಶಾಂಗ ಸಚಿವಾಲಯ ಕೂಡ ಖಚಿತಪಡಿಸಿದೆ. ಆದ್ರೆ ಈತ ಯಾರೂ ಹೆಸರೇನು ಅನ್ನೋ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಲಭ್ಯವಾಗಿರೋ ಮಾಹಿತಿಯ ಪ್ರಕಾರ ಇವರು ಬೆಂಗಳೂರಿನಲ್ಲಿರೋ ಕಂಪನಿಯೊಂದರ ಉದ್ಯೋಗಿಯಾಗಿದ್ದು ಬಿಸೆನೆಸ್‌ಟ್ರಿಪ್‌ ಮೇಲೆ ಟರ್ಕಿಯಲ್ಲಿದ್ರು ಅಂತ ಹೇಳಲಾಗಿದೆ. ಇತ್ತ ರಾಜ್ಯ ಸರ್ಕಾರ ಕೂಡ ಟರ್ಕಿಯಲ್ಲಿ ಸಿಲುಕಿದವರಿಗೆ ಸಹಾಯವಾಣಿ ಆರಂಭಿಸಿದ್ದು ಅದಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನೂ ನೇಮಕ ಮಾಡಲಾಗಿದೆ. ಈ ಕಡೆ ಟರ್ಕಿಯಲ್ಲಿ ಹತ್ತು ಭಾರತೀಯರು ಭೂಕಂಪನದಲ್ಲಿ ಸಿಲುಕಿದ್ರು. ಅವರೆಲ್ಲಾ ಈಗ ಸುರಕ್ಷಿತರಾಗಿದ್ದಾರೆ ಅಂತ ವಿದೇಶಾಂಗ ಸಚಿವಾಲಯ ಹೇಳಿದೆ.

-masthmagaa.com

Contact Us for Advertisement

Leave a Reply