ಟರ್ಕಿಗೆ ತೆರಳಿದ ಅಫ್ಘಾನಿಸ್ತಾನದ ನಿಯೋಗ! ಯಾಕೆ ಗೊತ್ತಾ..?

masthmagaa.com:

ಅಫ್ಘಾನಿಸ್ತಾನದಿಂದ ತಾಲಿಬಾನಿಗಳ ಹೈ ಲೆವೆಲ್ ನಿಯೋಗವೊಂದು ಟರ್ಕಿಗೆ ಹೋಗಿದೆ. ಅಲ್ಲಿ ಟರ್ಕಿ ಅಧಿಕಾರಿಗಳೊಂದಿಗೆ ತಾಲಿಬಾನಿಗಳು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಟೇಕೋವರ್ ಬಳಿಕ ಈ ರೀತಿ ಉಭಯದೇಶಗಳ ನಡುವೆ ಉನ್ನತ ಮಟ್ಟದ ಸಭೆ ನಡೀತಾ ಇರೋದು ಇದೇ ಮೊದಲಾಗಿದೆ. ತಾಲಿಬಾನ್ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವ ಅಮಿರ್ ಖಾನ್ ಮೊಟಾಕಿ ವಹಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಾಲಿಬಾನಿಗಳು ಕತಾರ್​ನ ದೋಹಾದಲ್ಲಿ ಅಮೆರಿಕ, ಯೂರೋಪಿನ 10 ದೇಶಗಳು ಮತ್ತು ಯೂರೋಪಿಯನ್ ಯೂನಿಯನ್ ಪ್ರತಿನಿಧಿಗಳ ಜೊತೆ ಮೀಟಿಂಗ್ ಮಾಡಿದ್ರು. ಅದ್ರ ಬೆನ್ನಲ್ಲೇ ನಡೆದ ಜಿ20 ಶೃಂಗಸಭೆಯಲ್ಲಿ ಮಾತಾಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯೆಪ್ ಎರ್ಡೋಆನ್​​, ಅಂತಾರಾಷ್ಟ್ರೀಯ ಸಮುದಾಯ ತಾಲಿಬಾನಿಗಳ ಜೊತೆ ಮಾತುಕತೆಗೆ ಮುಕ್ತವಾಗಿರಬೇಕು ಅಂತ ಹೇಳಿದ್ರು. ಈಗ ಟರ್ಕಿ ಪ್ರವಾಸ ಕೈಗೊಂಡಿದೆ ತಾಲಿಬಾನ್ ನಿಯೋಗ.

-masthmagaa.com

Contact Us for Advertisement

Leave a Reply