ಆ ಒಪ್ಪಂದದಿಂದ ಹೊರ ಬಂದಿದ್ಯಾಕೆ ಟರ್ಕಿ?

masthmagaa.com:

ಟರ್ಕಿ ಒಂದು ಮಹತ್ವದ ಅಂತಾರಾಷ್ಟ್ರೀಯ ಒಪ್ಪಂದದಿಂದ ಹೊರಬಂದಿದೆ. ಮಹಿಳೆಯರಿಗೆ ರಕ್ಷಣೆ ನೀಡುವ ಕೌನ್ಸಿಲ್ ಯೂರೋಪ್ ಟ್ರೀಟಿಯಿಂದ ಹೊರಬರೋದಾಗಿ ಟರ್ಕಿ ಅಧ್ಯಕ್ಷ ರೆಸೆಪ್ ಎರ್ಡೋಗನ್ ಘೋಷಿಸಿದ್ದಾರೆ. ಈ ಮೂಲಕ ಈಗಾಗಲೇ ಕೌಟುಂಬಿಕ ಹಿಂಸಾಚಾರ ಮತ್ತು ಮಹಿಳೆಯರ ನರಸಂಹಾರದಿಂದ ನಲುಗಿರುವ ಟರ್ಕಿ ಮಹಿಳೆಯರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ಒಪ್ಪಂದಕ್ಕೆ ಟರ್ಕಿಯಲ್ಲಿ ಇಸ್ತಾಂಬುಲ್ ಒಪ್ಪಂದ ಅಂತಲೇ ಕರೆಯಲಾಗುತ್ತೆ. ಕೌನ್ಸಿಲ್ ಆಫ್ ಯೂರೋಪ್ ಟ್ರೀಟಿಗೆ ಒಟ್ಟು 45 ದೇಶಗಳು ಮತ್ತು ಯೂರೋಪಿಯನ್ ಒಕ್ಕೂಟ ಕೂಡ ಸಹಿ ಹಾಕಿದೆ.

ಲಿಂಗ ಸಮಾನತೆ ಎತ್ತಿ ಹಿಡಿಯುವಲ್ಲಿ ಟರ್ಕಿ ಮುಂದಿದೆ ಅನ್ನೋದಕ್ಕೆ ಇಸ್ತಾಂಬುಲ್ ಒಪ್ಪಂದವೇ ಸಾಕ್ಷಿ ಅಂತ ರೆಸೆಪ್ ಎರ್ಡೋಗನ್ ಹೇಳಿಕೊಂಡಿದ್ರು. ಆದ್ರೆ ಅವರ ಪಕ್ಷದಲ್ಲೇ ಈ ಒಪ್ಪಂದಕ್ಕೆ ವಿರೋಧ ವ್ಯಕ್ತವಾಯ್ತು. ಇದ್ರಿಂದ ವಿಚ್ಛೇಧನ ಮತ್ತು ಸಲಿಂಗಕಾಮ ಜಾಸ್ತಿಯಾಗ್ತಿದೆ. ಈ ಒಪ್ಪಂದದಿಂದ ಹೊರಬರಬೇಕು ಅಂತ ಒತ್ತಾಯ ಕೇಳಿ ಬಂದಿತ್ತು. ಆದ್ರೆ ಇದಕ್ಕೆ ಮಹಿಳೆಯರು ಭಾರಿ ವಿರೋಧ ವ್ಯಕ್ತಪಡಿಸಿದ್ರು. ಒಪ್ಪಂದದಿಂದ ಹೊರಬರೋದುಬೇಡ ಅಂತ ಒತ್ತಾಯಿಸಿದ್ರು. ಟರ್ಕಿಯಲ್ಲಿ ಕಳೆದ ವರ್ಷ 300 ಮಂದಿ ಮಹಿಳೆಯರ ಹತ್ಯೆ ನಡೆದಿತ್ತು. ಇನ್ನು 171 ಮಂದಿ ಮಹಿಳೆಯರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಇಷ್ಟೆಲ್ಲಾ ಆದ್ರೂ ಕೂಡ ಟರ್ಕಿ ಇಸ್ತಾಂಬುಲ್ ಒಪ್ಪಂದದಿಂದ ಹೊರಬರಲು ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply