ರದ್ದಾಗಿರೋ ಕಾಯ್ದೆಯಡಿ ಸಾವಿರಾರು ಕೇಸ್: ಕೇಂದ್ರಕ್ಕೆ ಸುಪ್ರೀಂಕೋರ್ಟ್​ ನೋಟಿಸ್

masthmagaa.com:

ಐಟಿ ರೂಲ್ಸ್​ 2021 ಅನ್ನ ಪಾಲಿಸೋಕೆ ಸಾಮಾಜಿಕ ಜಾಲತಾಣಗಳಿಗೆ ಮೇ 26ರ ಡೆಡ್​​ಲೈನ್ ಕೊಟ್ಟರೂ ಜುಲೈ 1ರವರೆಗೂ ಟ್ವಿಟ್ಟರ್ ಅದನ್ನ ಇನ್ನೂ ಪಾಲಿಸಿಲ್ಲ ಅಂತ ದೆಹಲಿ ಹೈಕೋರ್ಟ್​ಗೆ ಕೇಂದ್ರ ಸರ್ಕಾರ ಅಫಿಡವಿಟ್​ ಸಲ್ಲಿಸಿದೆ. ಮತ್ತೊಂದ್ಕಡೆ ಈ ಹಿಂದೆಯೇ​ ರದ್ದುಗೊಳಿಸಿದ್ದ ಐಟಿ ಕಾಯ್ದೆ ಸೆಕ್ಷನ್​ 66ಎ ಅಡಿಯಲ್ಲಿ ಸಾವಿರಕ್ಕೂ ಹೆಚ್ಚು ಕೇಸ್​​ಗಳು ದಾಖಲಾಗಿರೋದ್ರ ಬಗ್ಗೆ ಸುಪ್ರೀಂಕೋರ್ಟ್​ ಅಚ್ಚರಿ ವ್ಯಕ್ತಪಡಿಸಿದೆ. ಅಲ್ಲದೆ ಈ ಬಗ್ಗೆ 2 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ. ಅಂದಹಾಗೆ ಆಕ್ರಮಣಕಾರಿ ಕಂಟೆಂಟ್​​ಗಳನ್ನು ಪೋಸ್ಟ್​ ಮಾಡುವವರನ್ನು ಅರೆಸ್ಟ್​ ಮಾಡಲು ಈ ಕಾನೂನು ಪೊಲೀಸರಿಗೆ ಅಧಿಕಾರ ಕೊಡ್ತಿತ್ತು. ಹೀಗಾಗಿ 2015ರಲ್ಲಿ ಈ ಕಾಯ್ದೆಯನ್ನು ಸುಪ್ರೀಂಕೋರ್ಟ್​ ರದ್ದುಪಡಿಸಿತ್ತು. ಆದ್ರೂ ಕೂಡ ನಂತರದಲ್ಲಿ ಈ ಕಾಯ್ದೆಯಡಿ ಸಾವಿರಕ್ಕೂ ಹೆಚ್ಚು ಕೇಸ್​​ಗಳನ್ನು ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply