ನೈಜೀರಿಯಾದಲ್ಲೂ ಟ್ವಿಟ್ಟರ್ ಬ್ಯಾನ್! ಯಾಕೆ ಗೊತ್ತಾ?

masthmagaa.com:

ನೈಜೀರಿಯಾದಲ್ಲಿ ಅನಿಶ್ಚಿತ ಅವಧಿಗೆ ಟ್ವಿಟರ್​ ಸೇವೆಯನ್ನೇ ಬ್ಯಾನ್ ಮಾಡಲಾಗಿದೆ. ಇತ್ತೀಚೆಗೆ ಅಧ್ಯಕ್ಷ ಮೊಹ್ಮದ್ ಬುಹಾರಿ ಮಾಡಿದ್ದ ಟ್ವೀಟ್​​​​ನ್ನು ಸಂಸ್ಥೆ ಕಡೆಯಿಂದ ಡಿಲೀಟ್ ಮಾಡಲಾಗಿತ್ತು. ಅದ್ರ ಬೆನ್ನಲ್ಲೇ ಈಗ ದೇಶದಲ್ಲಿ ಟ್ವಿಟರ್ ಸೇವೆಯನ್ನೇ ಬಂದ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಟ್ವಿಟ್ಟರ್​​, ಮೊಹ್ಮದ್ ಬುಹಾರಿ ಟ್ವೀಟ್ ನಮ್ಮ ನೀತಿಗೆ ವಿರುದ್ಧವಾಗಿತ್ತು. ಅದ್ಕೆ ಡಿಲೀಟ್ ಮಾಡಿದ್ವಿ. ಆದ್ರೆ ಅದಕ್ಕೆ ಟ್ವಿಟರ್ ಸೇವೆಯನ್ನೇ ಬ್ಯಾನ್ ಮಾಡಿರೋದು ಚಿಂತೆಯ ವಿಚಾರ ಅಂತ ಹೇಳಿದೆ. ಅಂದಹಾಗೆ ಬುಧವಾರ ರಾತ್ರಿ ಟ್ವೀಟ್ ಮಾಡಿದ್ದ ಬುಹಾರಿ, 1967-1970ರವರೆಗೆ 30 ತಿಂಗಳ ಕಾಲ ನಡೆದ ಗೃಹಯುದ್ಧವನ್ನು ಉಲ್ಲೇಖಿಸಿದ್ರು. ಇಂದಿನ ದಿನಗಳಲ್ಲಿ ಅನುಚಿತವಾಗಿ ವರ್ತಿಸುತ್ತಿರೋರಿಗೆ ಗೃಹಯುದ್ಧದ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ. ಆಗ ಎಷ್ಟು ಜನ ಸಾವನ್ನಪ್ಪಿದ್ರು ಅನ್ನೋದು ಕೂಡ ಗೊತ್ತಿಲ್ಲದೇ ಇರಬಹುದು. ನಾವು 30 ತಿಂಗಳ ಕಾಲ ಯುದ್ಧ ಮೈದಾನದಲ್ಲಿದ್ವಿ.. ಈಗಲೂ ವಿರೋಧಿಗಳಿಗೆ ಅದೇ ರೀತಿಯಲ್ಲಿ ಉತ್ತರ ಕೊಡಲಾಗುತ್ತೆ ಅಂತ ಹೇಳಿದ್ರು. ಈ ಬಗ್ಗೆ ನೈಜೀರಿಯಾ ಜನರಿಂದ ಭಾರಿ ವಿರೋಧ ವ್ಯಕ್ತವಾದ ಬಳಿಕ ಟ್ವಿಟ್ಟರ್​ ಈ ಟ್ವೀಟ್ ತೆಗೆದು ಹಾಕಿತ್ತು.

-masthmagaa.com

Contact Us for Advertisement

Leave a Reply