ಅರ್ಧಂಬರ್ಧ ಆದೇಶ ಪಾಲಿಸಿದ ಟ್ವಿಟ್ಟರ್ ವಿರುದ್ಧ ಸಿಡಿದೆದ್ದ ಕೇಂದ್ರ ಸರ್ಕಾರ!

masthmagaa.com:

ಟ್ವಿಟ್ಟರ್ ವಿರುದ್ಧ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ, ಸಿಟ್ಟು ಹೊರಹಾಕಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಮತ್ತು ಪ್ರಚೋದನಾಕಾರಿ ಕಂಟೆಂಟ್​ಗಳನ್ನ ಹಾಕುತ್ತಿದ್ದ, ನಿಯಮಗಳನ್ನ ಉಲ್ಲಂಘಿಸಿದ್ದ 1,178 ಅಕೌಂಟ್​ಗಳನ್ನ ತೆಗೆದು ಹಾಕುವಂತೆ ಸರ್ಕಾರ ಟ್ವಿಟ್ಟರ್ ಸಂಸ್ಥೆಗೆ ಆದೇಶಿಸಿತ್ತು. ಆದ್ರೆ ಸುಮಾರು 500 ಅಕೌಂಟ್​​ಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಉಳಿದ ಅಕೌಂಟ್​ಗಳನ್ನ ತಡೆ ಹಿಡಿಯಲು ಸಾಧ್ಯವಿಲ್ಲ. ಹಾಗೇನಾದ್ರೂ ಮಾಡಿದ್ರೆ ಜನರ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದಂತೆ ಆಗುತ್ತೆ ಕಾರಣ ಕೊಟ್ಟಿತ್ತು ಟ್ವಿಟ್ಟರ್​. ಇದಕ್ಕೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದಲ್ಲಿ ಕಾರ್ಯ ನಿರ್ವಹಿಸ್ತಿರೋ ಸಂಸ್ಥೆಯಾಗಿ ಟ್ವಿಟ್ಟರ್​, ಭಾರತದ ಕಾನೂನುಗಳನ್ನ ಪಾಲಿಸಲೇಬೇಕು. ಅದನ್ನ ಬಿಟ್ಟು ಇಲ್ಲಿನ ಕಾನೂನುಗಳನ್ನ ಪಾಲಿಸಲು ಟ್ವಿಟ್ಟರ್​​ನ ನಿಯಮಗಳು ಅಡ್ಡಿಯಾಗುತ್ತೆ ಅನ್ನೋ ಕಾರಣಗಳನ್ನ ಕೊಡಬಾರದು. ಬೇಕಿದ್ರೆ ನೀವು ಕೋರ್ಟ್​​ಗೆ ಹೋಗಿ ಅಂತ ನಿನ್ನೆ ನಡೆದ ಮೀಟಿಂಗ್​ನಲ್ಲಿ ಖಡಕ್​ ಎಚ್ಚರಿಕೆ ಕೊಟ್ಟಿದೆ. ಇದರ ಜೊತೆಗೆ ಅಮೆರಿಕದ ಕ್ಯಾಪಿಟಲ್​ ಹಿಲ್​​ನಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರವನ್ನ ಉಲ್ಲೇಖಿಸಿರೋ ಕೇಂದ್ರ ಸರ್ಕಾರ, ಆಗ ಹಲವು ಅಕೌಂಟ್​ಗಳನ್ನ ಬ್ಲಾಕ್ ಮಾಡಿದ್ರಿ. ಈಗ್ಯಾಕೆ ಈ ತಾರತಮ್ಯ. ಭಾರತಕ್ಕೊಂದು ನ್ಯಾಯ, ಅಮೆರಿಕಕ್ಕೊಂದು ನ್ಯಾಯನಾ. ಇದು ತುಂಬಾ ಬೇಸರದ ಸಂಗತಿ ಅಂತ ಹೇಳಿದೆ. ಅಂದ್ಹಾಗೆ ಐಟಿ ಆ್ಯಕ್ಟ್​ನ ಸೆಕ್ಷನ್​ 69ಎ ಅಡಿಯಲ್ಲಿ ಕೇಂದ್ರ ಸರ್ಕಾರ ಟ್ವಿಟ್ಟರ್​ ಸಂಸ್ಥೆಗೆ ನೋಟಿಸ್​ ಕಳಿಸಿತ್ತು. ಇದರ ಅಡಿಯಲ್ಲಿ ಟ್ವಿಟ್ಟರ್ ಸಂಸ್ಥೆ ಅಥವಾ ಅದರ ಅಧಿಕಾರಿಗಳು ಕೇಂದ್ರ ಸರ್ಕಾರದ ಜೊತೆ ಸಹಕರಿಸದಿದ್ರೆ ದಂಡ ಅಥವಾ ಜೈಲು ಶಿಕ್ಷೆ ಕೂಡ ವಿಧಿಸಲು ಅವಕಾಶವಿದೆ. ಇದನ್ನೆಲ್ಲಾ ನೋಡ್ತಿದ್ರೆ ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ಮಧ್ಯೆ ಕಾನೂನು ಹೋರಾಟ ನಡೆಯೋ ಎಲ್ಲಾ ಲಕ್ಷಣ ಕಾಣ್ತಿದೆ.

-masthmagaa.com

Contact Us for Advertisement

Leave a Reply