ಭಾರತದಲ್ಲಿ 500ಕ್ಕೂ ಹೆಚ್ಚು ಅಕೌಂಟ್​ಗಳನ್ನ​​ ಬ್ಯಾನ್ ಮಾಡಿದ ಟ್ವಿಟ್ಟರ್!

masthmagaa.com:

ಕೇಂದ್ರದ 3 ಕೃಷಿ ಕಾನೂನುಗಳನ್ನ ವಿರೋಧಿಸಿ ನಡೆಯುತ್ತಿರೋ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್​ನಲ್ಲಿ ಸಾಕಷ್ಟು ಸುಳ್ಳು ಸುದ್ದಿ ಮತ್ತು ಪ್ರಚೋದನಾಕಾರಿ ಕಂಟೆಂಟ್​ಗಳನ್ನ ಹಾಕುತ್ತಿದ್ದ 1,178 ಅಕೌಂಟ್​ಗಳನ್ನ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಟ್ವಿಟ್ಟರ್​ ಸಂಸ್ಥೆಗೆ ಸೂಚಿಸಿತ್ತು. ಸೂಕ್ತ ಕ್ರಮ ಕೈಗೊಳ್ಳದಿದ್ರೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕಾಗಬಹುದು ಅಂತಾನೂ ಎಚ್ಚರಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತಿರೋ ಟ್ವಿಟ್ಟರ್ ಸಂಸ್ಥೆ, ನಿಯಮಗಳನ್ನ ಸ್ಪಷ್ಟವಾಗಿ ಉಲ್ಲಂಘಿಸಿರೋ ಸುಮಾರು 500ಕ್ಕೂ ಹೆಚ್ಚು ಅಕೌಂಟ್​ಗಳನ್ನ ತಡೆ ಹಿಡಿದಿದೆ. ಕೆಲವೊಂದು ಅಕೌಂಟ್​​ಗಳನ್ನಂತೂ ಪರ್ಮನೆಂಟ್​ ಆಗಿ ಅಮಾನತು​ ಮಾಡಿದೆ. ಆದ್ರೆ ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು ಮತ್ತು ಮಾಧ್ಯಮ ಸಂಸ್ಥೆಗಳ ಅಕೌಂಟ್​​ಗಳನ್ನ ಬ್ಲಾಕ್ ಮಾಡಿಲ್ಲ. ಅವುಗಳನ್ನ ಬ್ಲಾಕ್ ಮಾಡಿದ್ರೆ ಅಭಿವ್ಯಕ್ತ ಸ್ವಾತಂತ್ರ್ಯವನ್ನ ಕಿತ್ತುಕೊಂಡಂತಾಗುತ್ತೆ ಅಂತ ಟ್ವಿಟ್ಟರ್​ ಸ್ಪಷ್ಟನೆ ಕೊಟ್ಟಿದೆ. ಇನ್ನು ಬ್ಲಾಕ್​ ಆಗಿರುವ ಖಾತೆಗಳು ಭಾರತದಲ್ಲಿ ಮಾತ್ರ ವರ್ಕ್ ಆಗಲ್ಲ. ಬೇರೆ ದೇಶದಲ್ಲಿ ವರ್ಕ್ ಆಗುತ್ತೆ. ಆದ್ರೆ ಯಾರ ಯಾರ ಅಕೌಂಟ್​ಗಳನ್ನ ಬ್ಲಾಕ್ ಮಾಡಲಾಗಿದೆ ಅನ್ನೋದನ್ನ ಬಹಿರಂಗಪಡಿಸಿಲ್ಲ. ಹೀಗೆ ತಾವು ತೆಗೆದುಕೊಂಡ ಕ್ರಮದ ಬಗ್ಗೆ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿಗೆ ಮಾಹಿತಿ ನೀಡಿದೆ ಟ್ವಿಟ್ಟರ್ ಸಂಸ್ಥೆ. ಒಂದ್ಕಡೆ ರೂಲ್ಸ್ ಬ್ರೇಕ್ ಮಾಡಿದ ಅಕೌಂಟ್​ಗಳನ್ನ ಬ್ಲಾಕ್ ಮಾಡಿದ್ದೇವೆ, ಮತ್ತೊಂದ್ಕಡೆ ಅಭಿವ್ಯಕ್ತ ಸ್ವಾತಂತ್ರ್ಯವನ್ನ ಕಿತ್ತುಕೊಳ್ಳಲು ಸಾಧ್ಯವಿಲ್ಲ ಅಂತಾನೂ ಟ್ವಿಟ್ಟರ್ ಹೇಳಿದೆ. ಅತ್ತ ಟ್ವಿಟ್ಟರ್​ ಜೊತೆ ಫೈಟ್​ ಏರ್ಪಟ್ಟ ಬೆನ್ನಲ್ಲೇ ಅದಕ್ಕೆ ಪರ್ಯಾಯವಾಗಿ ಕೇಂದ್ರದ ಸಚಿವರು ‘Koo’ ಅನ್ನೋ ಭಾರತದ ಅಪ್ಲಿಕೇಶನ್​ ಅನ್ನು ಪ್ರಮೋಟ್ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply