ಇಸ್ರೇಲ್ – ಲೆಬನಾನ್ ನಡುವೆ ಭೀಕರ ಕಾಳಗ! ಏರ್ ಸ್ಟ್ರೈಕ್ ನಡೆಸಿದ ಇಸ್ರೇಲ್

masthmagaa.com:

ನಿನ್ನೆ ಇಸ್ರೇಲ್ ಮೇಲೆ ಲೆಬನಾನ್ ನಡೆಸಿದ ರಾಕೆಟ್ ದಾಳಿ ಬಗ್ಗೆ ಹೇಳಿದ್ವಿ. ಅದಕ್ಕೆ ಪ್ರತಿಯಾಗಿ ಈಗ ಇಸ್ರೇಲ್ ಲೆಬನಾನ್ ಮೇಲೆ ಏರ್ ಸ್ಟ್ರೈಕ್ ನಡೆಸಿದೆ. ಲೆಬನಾನ್ ನಮ್ಮ ಮೇಲೆ ರಾಕೆಟ್ ವಾಯು ದಾಳಿಗೆ ಬಳಸಿದ ಲಾಂಚ್ ಪ್ಯಾಡ್ ಗಳಿರೋ ಅವರ ನೆಲೆಗಳ ಮೇಲೆ ನಾವು ಏರ್ ಸ್ಟ್ರೈಕ್ ನಡೆಸಿ ಪುಡಿಗಟ್ಟಿದ್ದೇವೆ ಅಂತ ಇಸ್ರೇಲಿ ಸೇನೆ ಹೇಳಿದೆ. ಆದ್ರೆ ಲೆಬನಾನ್ ನಲ್ಲಿ ಬಲಯುತವಾಗಿರೋ ಹೆಜ್ಬುಲ್ಲಾ ಸಂಘಟನೆಯ ಟಿವಿ ಮಾತ್ರ, ಇಸ್ರೇಲ್ ಯುದ್ಧ ವಿಮಾನಗಳು ಖಾಲಿ ಜಾಗದಲ್ಲಿ ಬಂದು ಬಾಂಬ್ ಬೀಳಿಸಿದ್ದಾರೆ. ಏನೂ ಡ್ಯಾಮೇಜ್ ಆಗಿಲ್ಲ ಅಂತ ಪ್ರತಿಕ್ರಿಯೆ ನೀಡಿದೆ. ಮತ್ತೊಂದು ಕಡೆ ಇಸ್ರೇಲ್ ದಾಳಿಯ ಜೊತೆಗೆ ಶೆಲ್ಲಿಂಗ್ ಮಾಡೋ ಮೂಲಕವೂ ಲೆಬನಾನ್ ಮೇಲೆ ದಾಳಿ ಮಾಡ್ತಿದೆ. ಇದರ ಪರಿಣಾಮ ಲೆಬನಾನ್ ನ ಹಲವು ಕಡೆ ಗ್ರಾಮಗಳಿಗೆಲ್ಲ ಬೆಂಕಿ ಬಿದ್ದ ಘಟನೆಗಳು ವರದಿಯಾಗಿವೆ.
ಇತ್ತೀಚೆಗಷ್ಟೇ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನ ಹಮಾಸ್ 11 ದಿನ ಬಡಿದಾಡಿ ಇನ್ನೇನು ಪೂರ್ಣ ಪ್ರಮಾಣದ ಯುದ್ಧ ಆಗೇ ಹೋಗುತ್ತೆ ಅನ್ನುವಷ್ಟರಲ್ಲಿ ಕದನವಿರಾಮ ಮಾಡಿಕೊಂಡಿದ್ವು. ಆದ್ರೆ ಈಗ ಮತ್ತೆ ಇಸ್ರೇಲ್ ಗೆ ಲೆಬನಾನ್ ಜೊತೆ ಗಲಾಟೆ ಶುರುವಾಗಿದೆ. ಇದು ಕೂಡ ಯುದ್ಧಕ್ಕೆ ಮುನ್ನುಡಿ ಬರೆಯಬಹುದು ಅನ್ನೋ ಆತಂಕ ಮನೆ ಮಾಡಿದೆ.

-masthmagaa.com

 

Contact Us for Advertisement

Leave a Reply