ಸಿರಿಯಾ ಮೇಲೆ ಅಮೆರಿಕ ಏರ್​​ಸ್ಟ್ರೈಕ್! ಯಾಕೆ ಗೊತ್ತಾ?

masthmagaa.com:

ಸಿರಿಯಾದಲ್ಲಿ ಅಮೆರಿಕ ಏರ್​​ಸ್ಟ್ರೈಕ್ ನಡೆಸಿದ್ದು, ಇರಾಕ್ ಗಡಿಯಲ್ಲಿದ್ದ ಇರಾನ್ ಬೆಂಬಲಿತ ಮಿಲಿಶಿಯಾ ಗ್ರೂಪ್​​ನ ನೆಲೆಗಳನ್ನು ಧ್ವಂಸಗೊಳಿಸಿದೆ. ಫೆಬ್ರವರಿ 15ರಂದು ಉತ್ತರ ಇರಾಕ್​​​​ನ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇದೇ ಉಗ್ರರ ಗುಂಪು ನಡೆಸಿದ್ದ ರಾಕೆಟ್ ದಾಳಿಯಲ್ಲಿ ಓರ್ವ ನಾಗರಿಕ ಮತ್ತು ಅಮೆರಿಕದ ಓರ್ವ ಅಧಿಕಾರಿ ಸಾವನ್ನಪ್ಪಿದ್ರು.

ಜೊತೆಗೆ ಓರ್ವ ಯೋಧ ಕೂಡ ಗಾಯಗೊಂಡಿದ್ರು. ಅದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಿರೋದಾಗಿ ಪೆಂಟಗಾನ್ ತಿಳಿಸಿದೆ. ಜೋ ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಅಮೆರಿಕ ನಡೆಸಿರುವ ಮೊದಲ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಇದ್ರಲ್ಲಿ ಎಷ್ಟು ಜನ ಸಾವನ್ನಪ್ಪಿದ್ಧಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ

-masthmagaa.com

Contact Us for Advertisement

Leave a Reply