ಮಾಸ್ಕ್ ಹಾಕದಿದ್ರೆ 2 ಲಕ್ಷ+ ರೂಪಾಯಿ ದಂಡ! ಎಲ್ಲಿ ಗೊತ್ತಾ?

masthmagaa.com:

ಮಾಸ್ಕ್ ಹಾಕದೆ ಬಸ್ಸು, ರೈಲು ಹಾಗೂ ವಿಮಾನದಲ್ಲಿ ಓಡಾಡೋರಿಗೆ ಅಮೆರಿಕದಲ್ಲಿ ಹೆವಿ ದಂಡ ಅನೌನ್ಸ್ ಮಾಡಲಾಗಿದೆ. ಮೊದಲಿಗಿಂತ ಡಬಲ್ ಮಾಡಲಾಗಿದೆ. ಈಗ ಮೊದಲ ಸಲ ಸಿಕ್ಕಿಬಿದ್ದವರಿಗೆ 1000 ಡಾಲರ್ ತನಕ ದಂಡ ಹಾಕಲಾಗುತ್ತೆ. ಅಂದ್ರೆ ಆಲ್ಮೋಸ್ಟ್ 75 ಸಾವಿರ ರೂಪಾಯಿ. ರಿಪೀಟ್ ತಪ್ಪು ಮಾಡುವವರಿಗೆ 3000 ಡಾಲರ್ ತನಕ ದಂಡ ವಿಧಿಸಲಾಗುತ್ತೆ. ಅಂದ್ರೆ ಆಲ್ಮೋಸ್ಟ್ 2 ಲಕ್ಷದ 20 ಸಾವಿರ ರೂಪಾಯಿಗೂ ಅಧಿಕ. ಈ ಹೆವಿ ಫೈನ್ ಬಗ್ಗೆ ಮಾತನಾಡಿರೋ ಅಧ್ಯಕ್ಷ ಜೋಸೆಫ್ ಬೈಡೆನ್, ನೀವು ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಕಟ್ಟಲು ತಯಾರಾಗಿ. ಸ್ವಲ್ಪನಾದ್ರೂ ಮರ್ಯಾದೆ ತೋರಿಸೋದು ಕಲೀರಿ’ ಅಂತ ಕಟುವಾಗಿ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply