ಅಮೆರಿಕದಲ್ಲಿ ಡ್ರಗ್ಸ್​ ಸೇವನೆಯಿಂದ ಸತ್ತವರೆಷ್ಟು ಗೊತ್ತಾ? ಶಾಕಿಂಗ್ ನ್ಯೂಸ್​​

masthmagaa.com:

ವಿಶ್ವದ ದೊಡ್ಡಣ್ಣ ಅಮೆರಿಕ ಈಗ ಮಾದಕ ಲೋಕಕ್ಕೇ ದೊಡ್ಡಣ್ಣನಾಗಿ ಹೊರಹೊಮ್ಮಿದೆ. ಯಾಕಂದ್ರೆ ಇಲ್ಲಿ ಕಳೆದ ವರ್ಷ ಮಾದಕ ವಸ್ತುಗಳಿಗೆ ದಾಖಲೆ ಪ್ರಮಾಣದಲ್ಲಿ ಜನ ಬಲಿಯಾಗಿದ್ಧಾರೆ. ಕೊರೋನಾದ ನಡುವೆಯೇ ಮುಗಿದು ಹೋದ ಕಳೆದ ವರ್ಷ ಅಮೆರಿಕದಲ್ಲಿ ಮಾದಕ ವಸ್ತುಗಳು ಓವರ್​ಡೋಸ್ ಆಗಿ 93,331 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು. 2019ಕ್ಕೆ ಹೋಲಿಸಿದ್ರೆ ಸಾವಿನ ಸಂಖ್ಯೆಯಲ್ಲಿ 29.4 ಪರ್ಸೆಂಟ್ ಜಾಸ್ತಿಯಾಗಿದೆ. ಅದ್ರಲ್ಲೂ 69,710 ಮಂದಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವೊಂದು ಮಾದಕ ಔಷಧಿಗಳನ್ನೇ ಸೇವಿಸಿ ಬಲಿಯಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಸಾವಿನ ಸಂಖ್ಯೆ ಜಾಸ್ತಿಯಾಗಿದೆಯಾದ್ರೂ ಕೆಂಟುಕ್ಕಿ, ಸೌತ್ ಕೆರೋಲಿನಾ, ವೆಸ್ಟ್ ವರ್ಜೀನಿಯಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಸಾವಿನ ಪ್ರಮಾಣ ಸ್ವಲ್ಪ ಜಾಸ್ತಿನೇ ಇದೆ. ಕೊರೋನಾ ಕಾಲದಲ್ಲಿ ಜನರಿಗೆ ಆರ್ಥಿಕವಾಗಿ ಕೆಲ ಸಮಸ್ಯೆ ಎದುರಾಯ್ತು. ಸಮಾಜದಲ್ಲಿ ಒಂದು ರೀತಿಯ ಪ್ರತ್ಯೇಕತೆ ಸೃಷ್ಟಿಯಾಯ್ತು. ಶಾಲಾ ಕಾಲೇಜಿಗೂ ಅಡ್ಡಿಯಾಯ್ತು. ಇದ್ರಿಂದ ಜನರಲ್ಲಿ ಒತ್ತಡ ಸೃಷ್ಟಿಯಾಯ್ತು ಅಂತ ಇತ್ತೀಚಿನ ವರದಿಯೊಂದು ಕೂಡ ತಿಳಿಸಿದೆ. ಇದೇ ಕಾರಣಕ್ಕೆ ಜನರಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಲು ಕಾರಣವಾಗಿರಬಹುದು ಅಂತ ಹೇಳಲಾಗಿದೆ. ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಸೋ ಮಾದಕ ವಸ್ತುಗಳ ಬಳಕೆ ಮತ್ತು ಅದರ ಓವರ್​ಡೋಸ್​ನಿಂದ 1999ರಿಂದ ಈವರೆಗೆ ಅಮೆರಿಕದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply