ರಷ್ಯಾ-ಯುಕ್ರೇನ್ ಸಂಘರ್ಷ: ಕ್ಷಿಪಣಿ ಪರೀಕ್ಷೆ ಮುಂದೂಡಿದ ರಷ್ಯಾ!

masthmagaa.com:

ಉದ್ವಿಗ್ನವಾಗಿರೋ ಜಾಗತಿಕ ವಾತಾವರಣವನ್ನ ಇನ್ನಷ್ಟು ಹಾಳ್ ಮಾಡೋದು ಬೇಡ ಅಂತ ಅಮೇರಿಕ ತನ್ನ ಖಂಡಾಂತರ ಕ್ಷಿಪಣಿ ʼಮಿನಟ್‌ಮ್ಯಾನ್‌ 3ʼ ಪರೀಕ್ಷೆಯನ್ನ ಮುಂದೂಡಿರೋದಾಗಿ ಹೇಳ್ಕೊಂಡಿದೆ. ಈ ಬಗ್ಗೆ ಪೆಂಟಗಾನ್‌ನ ವಕ್ತಾರ ಜಾನ್‌ ಕಿರ್ಬಿ ಮಾತಾಡಿ ಈ ಸಮಯದಲ್ಲಿ ರಷ್ಯಾ ಮತ್ತು ನಾವು ತಪ್ಪುಎಣಿಕೆಯ ರಿಸ್ಕ್‌ನ್ನ ಗಮನದಲ್ಲಿ ಇಟ್ಕೋಬೇಕು ಮತ್ತು ಆ ರಿಸ್ಕ್‌ ಆಗದಿರೋ ರೀತಿ ಹೆಜ್ಜೆಗಳನ್ನ ಇಡ್ಬೇಕು. ಅಪಾರ್ಥವಾಗೋ ಅಥವಾ ಬೇರೆನೇ ಅರ್ಥೈಕೆ ಆಗೋ ಯಾವುದೇ ಕ್ರಮಗಳನ್ನ ನಾವು ತಗೋಳೋದಿಲ್ಲ ಅನ್ನೋದನ್ನ ತೋರಿಸೋದಕ್ಕೆ ನಾವು ಈ ಪರೀಕ್ಷೆಯನ್ನ ಮುಂದೂಡ್ತಾ ಇರೋದು ಅಂತ ಹೇಳಿದ್ದಾರೆ. ಜೊತೆಗೆ ಇದರೊಂದಿಗೆ ನಾವು ಜವಾಬ್ದಾರಿಯುತ ಪರಮಾಣು ರಾಷ್ಟ್ರ ಅನ್ನೊದನ್ನ ನಿರೂಪಿಸ್ತಾ ಇದ್ದೀವಿ ಅಂತ ಹೇಳಿದ್ದಾರೆ. ಇನ್ನು ಪರಮಾಣು ಸಾಮರ್ಥ್ಯದ ಈ ಮಿನಟ್‌ಮ್ಯಾನ್‌ 3 ಕ್ಷಿಪಣಿ ಸುಮಾರು ಒಂಬತ್ತು ಸಾವಿರ ಕೀ.ಮೀ ದೂರ ಮತ್ತು ಗಂಟೆಗೆ 24 ಸಾವಿರ ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲದು.

-masthmagaa.com

Contact Us for Advertisement

Leave a Reply