ರಾಣಿ ಎಲಿಜಬೆತ್​​ ನೋಡಿ ಅಮ್ಮ ನೆನಪಾದರು: ಜೋ ಬೈಡೆನ್

masthmagaa.com:

ಜಿ7 ಮೀಟಿಂಗ್ ಆದ್ಮೇಲೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಜಿಲ್ ಬೈಡೆನ್ ವಿಂಡ್ಸರ್ ಕ್ಯಾಸಲ್​​​ನಲ್ಲಿ ಬ್ರಿಟನ್ ರಾಣಿ ಎಲಿಜಬೆತ್​​​​ ಭೇಟಿಯಾದ್ರು. ನಂತರ ಮಾತನಾಡಿದ ಜೋ ಬೈಡೆನ್​​, ರಾಣಿ ಎಲಿಜಬೆತ್​​​​ ನೋಡಿ ನನಗೆ ನನ್ನ ಅಮ್ಮ ನೆನಪಾದ್ರು. ರಾಣಿ ಎಲಿಜಬೆತ್​​ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಗ್ಗೆಯೂ ವಿಚಾರಿಸಿದ್ರು ಅಂತ ತಿಳಿಸಿದ್ದಾರೆ. ಅಂದಹಾಗೆ ವಿಂಡ್ಸರ್ ಕ್ಯಾಸಲ್​​ಗೆ ಭೇಟಿ ನೀಡ್ತಿರೋ 5ನೇ ಅಧ್ಯಕ್ಷ ಬೈಡೆನ್ ಆಗಿದ್ದಾರೆ. ಇದಕ್ಕೂ ಮುನ್ನ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಮತ್ತು ರೊನಾಲ್ಡ್ ರೀಗನ್ ಇಲ್ಲಿಗೆ ಭೇಟಿ ನೀಡಿದ್ರು. ಅಂದಹಾಗೆ 69 ವರ್ಷಗಳಿಂದಲೂ ರಾಣಿಯಾಗಿರೋ ಎಲಿಜಬೆತ್​​​​ ಈವರೆಗೆ ಕಳೆದ 14 ಅಮೆರಿಕನ್ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ಇನ್ನು ರಾಣಿ ಭೇಟಿಯಾದ ಬಳಿಕ ಜೋ ಬೈಡೆನ್ ಮತ್ತು ಜಿಲ್ ಬೈಡೆನ್ ಬ್ರಸೆಲ್ಸ್​​ಗೆ ಬಂದಿದ್ದಾರೆ. ಇಲ್ಲಿ ನ್ಯಾಟೋ ಮತ್ತು ಯೂರೋಪಿಯನ್ ಒಕ್ಕೂಟದ ನಾಯಕರ ಜೊತೆಗೆ ಸಭೆ ನಡೆಸಲಿದ್ದಾರೆ.

-masthmagaa.com

Contact Us for Advertisement

Leave a Reply