ಫೇಕ್ ವಿಡಿಯೋ ಬಿಟ್ಟು ಯುಕ್ರೇನ್​ ಮೇಲೆ ಅಟ್ಯಾಕ್​ ಮಾಡ್ಬೋದು ರಷ್ಯಾ!

masthmagaa.com:

ಯುಕ್ರೇನ್‌ ತನ್ನ ಮೇಲೆ ಆಕ್ರಮಣ ಮಾಡುತ್ತಿದೆʼ ಅನ್ನೋ ಫೇಕ್‌ ವಿಡೀಯೋವನ್ನ ರಷ್ಯಾ ಸೃಷ್ಟಿ ಮಾಡಿ, ಅದೇ ನೆಪದಲ್ಲಿ ಯುಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಬಹುದು ಅಂತ ಅಮೆರಿಕ ಹೇಳಿದೆ. ಈ ಸಂಬಂಧ ಮಾತನಾಡಿರೋ ಪೆಂಟಗಾನ್‌ (ಅಂದ್ರೆ ಅಮೇರಿಕ ಸೇನಾ ಮುಖ್ಯ ಕಛೇರಿಯ) ವಕ್ತಾರ ಕಿರ್ಬಿ “ಇದು ಹೊಸದೇನಲ್ಲ, ಈ ಹಿಂದೆ ರಷ್ಯಾ ಹಲವು ಬಾರಿ ಈ ರೀತಿ ಮಾಡಿದೆ. ಯುಕ್ರೇನ್‌ನಲ್ಲಿ ರಷ್ಯನ್‌ ಮಾತನಾಡುವ ಜನರ ಮೇಲೆ ಅಥವಾ ನೇರ ರಷ್ಯಾದ ಮೇಲೇನೆ ದಾಳಿ ನಡೀತಿದೆ ಅನ್ನೋ ರೀತಿ ಈ ವಿಡೀಯೋ ಇರಬಹುದು, ಅದರಲ್ಲಿ ಗ್ರಾಫಿಕ್‌ ಮೂಲಕ ಹೆಣದ ರಾಶಿಗಳನ್ನು, ಜನರು ದುಃಖ ಪಡುತ್ತಿರುವದನ್ನು ತೋರಿಸಿ ನಂತರ ಅದನ್ನೇ ನೆಪವಾಗಿಸಿಕೊಳ್ಳಬಹುದು ಎಂಬ ಮಾಹಿತಿ ನಮಗೆ ಇದೆ” ಅಂತ ಹೇಳಿದ್ದಾರೆ .
– ರಷ್ಯಾ ಮೇಲೆ ಅಮೆರಿಕ ಹೇರಿರೋ ಯಾವುದಾದ್ರೂ ಎಕ್ಸ್​ಪೋರ್ಟ್ ಕಂಟ್ರೋಲ್​ ಅನ್ನ ಚೀನಾದ ಕಂಪನಿಗಳು ಉಲ್ಲಂಘಿಸಿದ್ರೆ ಅದರ ಪರಿಣಾಮ ಎದುರಿಸಬೇಕಾಗುತ್ತೆ ಅಂತ ಅಮೆರಿಕ ಎಚ್ಚರಿಸಿದೆ. ಯುಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡ್ಬೋದು ಅನ್ನೋ ಹಿನ್ನೆಲೆಯಲ್ಲಿ ರಷ್ಯಾಗೆ ರಫ್ತಾಗುವ ವಸ್ತುಗಳ ಮೇಲೆ ಅಮೆರಿಕ ಕೆಲವೊಂದು ನಿರ್ಬಂಧ ಹೇರಿದೆ. ಆದ್ರೆ ರಷ್ಯಾ-ಚೀನಾ ಕ್ಲೋಸ್​ ಫ್ರೆಂಡ್ಸ್ ಆಗಿರೋದ್ರಿಂದ ಇಂಥಾ ಟೈಮಲ್ಲಿ ಚೀನಾದ ಕಂಪನಿಗಳು ನಿಯಮಮೀರಿ ರಷ್ಯಾಗೆ ಹೆಚ್ಚು ವಸ್ತುಗಳನ್ನ ರಫ್ತು ಮಾಡ್ಬೋದು ಅನ್ನೋ ಅನುಮಾನ ಅಮೆರಿಕಗಿದೆ. ಹೀಗಾಗಿ ಈಥರ ವಾರ್ನಿಂಗ್ ಕೊಟ್ಟಿದೆ. ಗುರುವಾರ ಬೀಜಿಂಗ್​ನಲ್ಲಿ ಚೀನಾ ಮತ್ತು ರಷ್ಯಾ ವಿದೇಶಾಂಗ ಸಚಿವರು ಮಾತುಕತೆ ನಡೆಸಿ, ಯುಕ್ರೇನ್​ ವಿಚಾರದಲ್ಲಿ ಎರಡೂ ದೇಶಗಳು ತಮ್ಮ ನಿಲುವನ್ನ ಪರಸ್ಪರ ಹಂಚಿಕೊಂಡಿವೆ ಅಂತ ಘೋಷಣೆ ಮಾಡಿದ್ರು. ಸೋ ಯುಕ್ರೇನ್​ ಮೇಲಿನ ಆಕ್ರಮಣಕ್ಕೆ ಚೀನಾ ರಷ್ಯಾಗೆ ಸಹಾಯ ಮಾಡ್ಬೋದು ಅನ್ನೋದು ಅಮೆರಿಕ ಲೆಕ್ಕಾಚಾರ.
– ಯುಕ್ರೇನ್‌-ರಷ್ಯಾ ಮಧ್ಯದ ಉದ್ವಿಗ್ನತೆ ಭುಗಿಲೆದ್ದಿರುವ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ಪುಟಿನ್‌ ಮತ್ತು ಚೀನಾ ಅಧ್ಯಕ್ಷ ಶಿ-ಜಿನ್‌ಪಿಂಗ್ ಬೀಜಿಂಗ್‌ನಲ್ಲಿ ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಭೇಟಿ ಬಳಿಕ ಬೀಜಿಂಗ್​ ವಿಂಟರ್​ ಲಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

-masthmagaa.com

Contact Us for Advertisement

Leave a Reply