ಮಂಗಳ, ಗುರು ನಡುವಿನ ಕ್ಷುದ್ರಗ್ರಹಕ್ಕೆ ಇಳಿಯಲು ಯುಎಇ ಸಿದ್ಧತೆ

masthmagaa.com:

ಯುನೈಟೆಡ್ ಅರಬ್ ಎಮಿರೇಟ್ಸ್​ ಬಾಹ್ಯಾಕಾಶ ಮಿಷನ್ ಒಂದನ್ನು ಘೋಷಣೆ ಮಾಡಿದೆ. ಸೃಷ್ಟಿಯ ರಹಸ್ಯ ತಿಳಿಯಲು ಮಂಗಳ ಮತ್ತು ಗುರು ಗ್ರಹಗಳ ನಡುವೆ ಇರೋ ಕ್ಷುದ್ರಗ್ರಹದ ಮೇಲೆ ಸ್ಪೇಸ್​ಕ್ರಾಫ್ಟ್​ ಲ್ಯಾಂಡ್ ಮಾಡೋ ಯೋಜನೆ ಘೋಷಿಸಿದೆ. ಒಂದ್ವೇಳೆ ಈ ಸಾಧನೆ ಮಾಡಿದ್ರೆ ಯೂರೋಪಿಯನ್ ಯೂನಿಯನ್, ಜಪಾನ್ ಮತ್ತು ಅಮೆರಿಕದ ಸಾಲಿಗೆ ಯುಎಇ ಕೂಡ ಸೇರಲಿವೆ. ಯಾಕಂದ್ರೆ ಈ ದೇಶಗಳು ಈಗಾಗಲೇ ಈ ಸಾಧನೆ ಮಾಡಿವೆ. ಕ್ಷುದ್ರಗ್ರಹದ ಮೇಲೆ ಲ್ಯಾಂಡ್ ಆದ ಬಳಿಕ ಸ್ಪೇಸ್​ ಕ್ರಾಫ್ಟ್​​ ಆ ಕ್ಷುದ್ರಗ್ರಹದ ರಚನೆ ಕುರಿತ ಮಾಹಿತಿಗಳನ್ನು ಕಳುಹಿಸಲಿದೆ. ಸ್ಪೇಸ್​​ಕ್ರಾಫ್ಟ್​​ನಲ್ಲಿ ಬ್ಯಾಟರಿ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಇದು ಕೆಲಸ ಮಾಡುತ್ತೆ ಅಂತ ಯುಎಇ ತಿಳಿಸಿದೆ. ಇದು ನಾಳೆನೋ ನಾಡಿದ್ದೋ ಕಳುಹಿಸೋದಲ್ಲ.. ದೀರ್ಘಕಾಲದ ಯೋಜನೆ ಇದಾಗಿದ್ದು, 2028ರಲ್ಲಿ ಸ್ಪೇಸ್​ ಕ್ರಾಫ್ಟ್ ಲಾಂಚ್ ಮಾಡಿ, 2033ರಲ್ಲಿ ಕ್ಷುದ್ರಗ್ರಹದ ಮೇಲೆ ಲ್ಯಾಂಡ್ ಮಾಡಿಸೋದು ಈ ಯೋಜನೆಯಾಗಿದೆ. ಈ 5 ವರ್ಷಗಳಲ್ಲಿ ಬಾಹ್ಯಾಕಾಶ ನೌಕೆ ಸುಮಾರು 360 ಕೋಟಿ ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಆರಂಭದಲ್ಲಿ ಶುಕ್ರಗ್ರಹದತ್ತ ಹೋಗಿ, ಅಲ್ಲಿಂದ ಮತ್ತೆ ಭೂಮಿ ಕಡೆಗೆ ವಾಪಸ್ ಬಂದು ನಂತರ ಮಂಗಳ ಗ್ರಹವನ್ನು ದಾಟಿ ಅಲ್ಲಿರೋ ಕ್ಷುದ್ರಗ್ರಹವನ್ನು ತಲುಪಲಿದೆ. ಅಂದಹಾಗೆ ಈ ಕ್ಷುದ್ರಹಗ್ರ ಭೂಮಿಯಿಂದ 56 ಕೋಟಿ ಕಿಲೋಮೀಟರ್ ದೂರದಲ್ಲಿದೆ.

-masthmagaa.com

Contact Us for Advertisement

Leave a Reply