ಕರ್ನಾಟಕದ ಜೊತೆಗಿನ ಗಡಿರೇಖೆಗಳಲ್ಲಿ ಬದಲಾವಣೆ ಆಗಬೇಕು: ಮಹಾ ಡಿಸಿಎಂ

masthmagaa.com:

ದೇಶದಲ್ಲಿ ಭಾಷಾವಿವಾದ ನಡೀತಾ ಇರೋ ಬೆನ್ನಲ್ಲೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಗಡಿ ಕ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರದ ಸಂಸ್ಥಾಪನ ದಿನದ ಅಂಗವಾಗಿ ಪುಣೆಯಲ್ಲಿ ಮಾತಾಡಿರೋ ಅವ್ರು, ಕರ್ನಾಟಕದ ಜೊತೆಗಿನ ಗಡಿರೇಖೆಗಳಲ್ಲಿ ಬದಲಾವಣೆ ಆಗಬೇಕು ಅಂತ ಹೇಳಿದ್ದಾರೆ. ಇನ್ನು ಮಹಾರಾಷ್ಟ್ರ ರಚನೆಯಾಗಿ 62 ವರ್ಷ ಆಯ್ತು. ಆದ್ರೂ ಕೂಡ ಬೀದರ್‌, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿಯಲ್ಲಿ ಮರಾಠಿ ಮಾತಾಡೋ ಹಳ್ಳಿಗಳು ಇವೆ ಅನ್ನೋದಕ್ಕೆ ವಿಷಾದವಾಗುತ್ತೆ. ನಮ್ಮ ಜನ ಮತ್ತು ನಮ್ಮ ಸರ್ಕಾರ, ಮಹಾರಾಷ್ಟ್ರ ಸೇರಬೇಕು ಅಂತ ಬಯಸ್ತಿರೋ ಆ ಜನ್ರ ಹೋರಾಟಕ್ಕೆ ಬೆಂಬಲ ನೀಡ್ತೇವೆ. ಆ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರೋವರ್ಗು ನಮ್ಮ ಬೆಂಬಲ ಇದ್ದೇ ಇರುತ್ತೆ ಅಂತ ಹೇಳಿದ್ದಾರೆ. ಗಡಿ ತಗಾದೆಗೆ ಸಂಬಂಧಿಸಿದಂತೆ ಮಹಾಜನ್‌ ಆಯೋಗ ರಚನೆ ಮಾಡಲಾಗಿತ್ತು. ಅದ್ರ ವರದಿ ಪ್ರಕಾರ ಗಡಿ ವಿವಾದ ಇತ್ಯರ್ಥವಾಗಿತ್ತು. ಆದ್ರೂ ಕೂಡ ಮಹಾರಾಷ್ಟ್ರ ಈ ಪ್ರದೇಶ ತಮಗೆ ಸೇರಿದೆ ಅಂತ ಪ್ರತಿಪಾದಿಸುತ್ತೆ. ಸದ್ಯ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿ ಇದೆ.

-masthmagaa.com

Contact Us for Advertisement

Leave a Reply