ಯುಎಫ್​​​ಎ ಏಲಿಯನ್​ಗಳ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಡ್ರೋನ್​!

masthmagaa.com:

ಯುಎಫ್​​​ಒ.. ಅನ್​​ಐಡೆಂಟಿಫೈಡ್​​ ಫ್ಲೈಯಿಂಗ್ ಆಬ್ಜೆಕ್ಟ್​​ ಕುರಿತು ಅಮೆರಿಕದ ಹಾರ್ವರ್ಡ್​ ವಿವಿಯ ಪ್ರೊಫೆಸರ್ ಅವಿ ಲೋಯೆಬ್​​ ಅನ್ನೋರು ಹೊಸ ವಾದವನ್ನು ಮುಂದಿಟ್ಟಿದ್ದಾರೆ. ಯುಎಫ್​​ಒಗಳು ಬಾಹ್ಯಾಕಾಶದಲ್ಲಿರೋ ಒಂದು ಪ್ರಾಚೀನ ನಾಗರಿಕತೆಯ ಅಸ್ತ್ರವಾಗಿರಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​ನ ಡ್ರೋನ್​​ಗಳಾಗಿರಬಹುದು ಅಂತ ಕೂಡ ತಿಳಿಸಿದ್ದಾರೆ. ಈ ಬಗ್ಗೆ ಅವಿ ಲೋಯೆಬ್ ಒಂದು ಅಧ್ಯಯನ ನಡೆಸ್ತಿದ್ದು, ಅದಕ್ಕೆ ಗೆಲಿಲಿಯೋ ಅಂತ ಹೆಸರಿಟ್ಟಿದ್ದಾರೆ. ಈ ಅಧ್ಯಯನದಲ್ಲಿ ಅವರು ಏಲಿಯನ್​ಗಳ ಇರುವಿಕೆಗೆ ಸ್ಪಷ್ಟವಾದ ಸಾಕ್ಷ್ಯವನ್ನು ಹುಡುಕೋಕೆ ಮುಂದಾಗಿದ್ದಾರೆ. ಅಂದಹಾಗೆ ಈ ಅವಿ ಲೋಯೆಬ್ ಬೇರೆ ಯಾರೂ ಅಲ್ಲ.. ಈ ಹಿಂದೆ ಬಾಹ್ಯಾಕಾಶದಲ್ಲಿ ಪತ್ತೆಯಾಗಿದ್ದ ಒಂದು ವಿಚಿತ್ರ ರಚನೆಯನ್ನು ಇವರು ಏಲಿಯನ್​​​ಗಳ ಬಾಹ್ಯಾಕಾಶ ನೌಕೆ ಇರಬಹುದು ಅಂತ ಹೇಳಿ ಫುಲ್ ಸುದ್ದಿಯಾಗಿದ್ರು. ಅಂದಹಾಗೆ ಈ ವಸ್ತುಗೆ ಓಮುವಾಮುವಾ ಅಂತ ಹೆಸರಿಡಲಾಗಿತ್ತು. ನೋಡೋಕೆ ಒಳ್ಳೆ ಸಬ್​ಮರೀನ್ ಆಕಾರದಲ್ಲೇ ಇತ್ತು. ಆದ್ರೆ ನಂತರದಲ್ಲಿ ಇದು ಒಂದು ಧೂಮಕೇತುವಾಗಿತ್ತು ಅಂತ ಕೂಡ ಗೊತ್ತಾಗಿತ್ತು. ಅಂದಹಾಗೆ ಇತ್ತೀಚೆಗೆ ಯುಎಫ್​ಒಗಳ ಕುರಿತು ಅಮೆರಿಕ ಗುಪ್ತಚರ ವರದಿ ಬಹಿರಂಗ ಮಾಡಿತ್ತು. ಅದ್ರಲ್ಲಿ ಯುಎಫ್​​ಒ ಏನು ಅನ್ನೋದನ್ನು ಸ್ಪಷ್ಟವಾಗಿ ಹೇಳಿರಲೇ ಇಲ್ಲ. ಹೀಗಾಗಿ ಈಗ ಅವಿ ಲೋಯೆಬ್​ ಫೀಲ್ಡ್​​ಗೆ ಇಳಿದಿದ್ದಾರೆ.

-masthmagaa.com

Contact Us for Advertisement

Leave a Reply