masthmagaa.com:

ಕೊರೋನಾ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದ UGC-NET (ಡಿಸೆಂಬರ್ 2020) ಪರೀಕ್ಷೆಯ ಡೇಟ್​ ಅನೌನ್ಸ್ ಆಗಿದೆ. ಮೇ 2ರಿಂದ ಮೇ 17ರವರೆಗೆ ( ಮೇ 2, 3, 4, 5, 6, 7, 10, 11, 12, 14 ಮತ್ತು 17) ನೆಟ್​ ಪರೀಕ್ಷೆ ನಡೆಸಲಾಗುತ್ತೆ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾಹಿತಿ ನೀಡಿದ್ದಾರೆ. ಈ ಪರೀಕ್ಷೆಯನ್ನ ನ್ಯಾಷನಲ್​ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಲಿದೆ. ನೆಟ್​ ಎಕ್ಸಾಂ ಸಂಪೂರ್ಣವಾಗಿ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಆಗಿರುತ್ತೆ. ಒಟ್ಟು ಎರಡು ಪೇಪರ್​ನ ಪರೀಕ್ಷೆ ಇದಾಗಿದೆ. ಮೊದಲ ಪೇಪರ್​ 100 ಅಂಕಗಳದ್ದಾಗಿದ್ದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯುತ್ತೆ. ಎರಡನೇ ಪೇಪರ್ 200 ಅಂಕಗಳದ್ದಾಗಿದ್ದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯುತ್ತೆ. ಫೆಬ್ರವರಿ 2ರಿಂದ ಮಾರ್ಚ್​ 2ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಫೀಸ್ ಕಟ್ಟಲು ಮಾರ್ಚ್​ 3ನೇ ತಾರೀಖು ಕೊನೇ ದಿನ. ಹೆಚ್ಚಿನ ಮಾಹಿತಿಗೆ ಯುಜಿಸಿ ವೆಬ್​ಸೈಟ್​ ಆಗಿರುವ www.ugcnet.nta.nic.in ಚೆಕ್ ಮಾಡಿ.

-masthmagaa.com

Contact Us for Advertisement

Leave a Reply