M.Phil ಕೋರ್ಸ್‌ಗೆ ಅರ್ಜಿ ಆಹ್ವಾನಿಸದಂತೆ UGC ಸೂಚನೆ!

masthmagaa.com:

‌ಮುಂದಿನ ವರ್ಷದಿಂದ ಉನ್ನತ ಶಿಕ್ಷಣ ಇಲಾಖೆಗೆ M.Phil (ಮಾಸ್ಟರ್‌ ಆಫ್‌ ಫಿಲಾಸಫಿ) ಅರ್ಜಿಗಳನ್ನ ಕರೆಯದಂತೆ ಯುನಿವರ್ಸಿಟಿ ಗ್ರ್ಯಾಂಟ್‌ ಕಮೀಷನ್‌ (UGC) ಸೂಚಿಸಿದೆ. 2022ರ ಸಪ್ಟೆಂಬರ್‌ನಲ್ಲಿ ಪಿ.ಎಚ್‌.ಡಿ ಕೋರ್ಸ್‌ನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನ ತಂದಿತ್ತು. ಇದೀಗ M.Phill ಪದವಿಗೆ ತಿಲಾಂಜಲಿ ಇಡೋಕ್ಕೆ UGC ಮುಂದಾಗಿದೆ ಅಂತ ತಿಳಿದು ಬಂದಿದೆ. ಇನ್ನು ಪಿ.ಎಚ್‌.ಡಿ ವ್ಯಾಸಂಗಕ್ಕೆ ಅವಕಾಶ ಪಡೆಯಲು, ಪದವಿಯಲ್ಲಿ 75% ಅಗ್ರಿಗೇಡ್ ಅಂಕ ಪಡೆದಿರಬೇಕು. ಅಥ್ವಾ ಆ ಪರ್ಸೆಂಟೇಜ್‌ಗೆ ಸಮನಾದ 4 ವರ್ಷದ 8 ಸೆಮಿಸ್ಟರ್‌ನ ಯಾವುದೇ ಡಿಗ್ರಿ ಹಾಗೂ ಕನಿಷ್ಟ ಒಂದು ವರ್ಷದ ಮಾಸ್ಟರ್‌ ಡಿಗ್ರಿ ಇರ್ಬೇಕು ಅಂತೇಳಲಾಗಿದೆ. M.Phil ಗೆ ಆಲ್ಟರ್ನೇಟಿವ್‌ ಆಗಿ ಪಿಎಚ್‌ಡಿ ಸೇರಿದಂತೆ ಹಲವು ಡಿಗ್ರಿಗಳು ಇರೋದ್ರಿಂದ M.Phil ಕೋರ್ಸನ್ನ UGC ಡೀರೆಕಗ್ನೈಸ್‌ ಮಾಡ್ತಿದೆ.

-masthmagaa.com

Contact Us for Advertisement

Leave a Reply