ಬ್ರಿಟನ್‌ ರಾಜರ ಮುಂದೆ ಮಂಡಿಯೂರಿ ರಾಜನಿಷ್ಠೆ ಪ್ರತಿಜ್ಞೆ ಆಚರಣೆಗೆ ಗೇಟ್‌ಪಾಸ್‌!

masthmagaa.com:

ಮೇ 6ರಂದು ನಡೆಯಲಿರುವ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಅವ್ರ ಅದ್ಧೂರಿ ಪಟ್ಟಾಭಿಷೇಕ ಹಾಗೂ ಪ್ರತಿಜ್ಞಾವಿಧಿ ಸ್ವೀಕರಿಸುವ ಸಮಾರಂಭಕ್ಕೆ ಬ್ರಿಟನ್‌ ಜನರಿಗೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಬ್ರಿಟನ್‌ ರಾಜಮನೆತನದ ಸಾಂಪ್ರದಾಯ ಆಚರಣೆಯಾದ, ʻHomage of Peers’ ಅಂದ್ರೆ ಶ್ರೀಮಂತರ ಪ್ರತಿನಿಧಿಗಳು ರಾಜನ ಮುಂದೆ ಮಂಡಿಯೂರಿ ತಮ್ಮ ರಾಜನಿಷ್ಠೆ ಪ್ರತಿಜ್ಞೆ ಮಾಡುವುದನ್ನ ರದ್ಧುಗೊಳಿಸಲಾಗಿದೆ. ಈ ವಿಚಾರವನ್ನ ಪಟ್ಟಾಭಿಷೇಕ ಜವಬ್ದಾರಿ ಹೊತ್ತುಕೊಂಡಿರುವ ಕ್ಯಾಂಟರ್ಬರಿಯ ಆರ್ಚ್‌ಬಿಷಪ್‌ ಜಸ್ಟಿನ್‌ ವೆಲ್ಬೆ ಅವ್ರ ಕಚೇರಿ ತಿಳಿಸಿದೆ. ಈ Homage of Peers’ ಬದಲಾಗಿ ʻHomage of the Peopleʼ ಅಂದ್ರೆ ಬ್ರಿಟನ್‌ ಜನರಿಗೆ ಗೌರವ ನೀಡುವ ಸಲುವಾಗಿ ಕಿಂಗ್‌ ಚಾರ್ಲ್ಸ್‌ ಜನರಿಗೆ ಆಹ್ವಾನ ಕೊಟ್ಟಿದ್ದಾರೆ. ಇತ್ತ ಪಟ್ಟಾಭಿಷೇಕ ಸಮಾರಂಭದಲ್ಲಿ ಕಿಂಗ್‌ 3ನೇ ಚಾರ್ಲ್ಸ್‌ ಹಾಗೂ ಕ್ವೀನ್‌ ಕಾನ್ಸರ್ಟ್‌ ಕ್ಯಾಮಿಲ್ಲ ಅವ್ರು ವಿಭಿನ್ನ ರೀತಿಯ ಬೇರೆ ಬೇರೆ ವಸ್ತ್ರಗಳನ್ನ ಧರಿಸಲಿದ್ದಾರೆ. 1937ರಲ್ಲಿ ಕಿಂಗ್‌ 6ನೇ ಜಾರ್ಜ್‌ ತಮ್ಮ ಪಟ್ಟಾಭಿಷೇಕ ಸಮಾರಂಭದಲ್ಲಿ ಧರಿಸಿದ್ದ ಚಿನ್ನದ ಬಾರ್ಡರ್‌ ಇರುವ ಉದ್ದನೆಯ ನಿಲುವಂಗಿಯನ್ನ ಕಿಂಗ್‌ ಚಾರ್ಲ್ಸ್‌ ಧರಿಸಲಿದ್ದಾರೆ. ಅದೇ ರೀತಿ 1953ರಲ್ಲಿ ಕ್ವೀನ್‌ 2ನೇ ಎಲಿಜಬೆತ್‌ ಧರಿಸಿದ್ದ ರೋಬ್‌ ಅಥ್ವಾ ಉದ್ದನೆಯ ಡ್ರೆಸ್‌ನ್ನ ಕ್ಯಾಮಿಲ್ಲ ಅವ್ರು ಧರಿಸಲಿದ್ದಾರೆ ಅಂತ ರಾಯಲ್‌ ಫ್ಯಾಮಿಲಿ ಹೇಳಿದೆ.

-masthmagaa.com

Contact Us for Advertisement

Leave a Reply