ಬೋರಿಸ್‌ ವೆಲ್‌ಕಂ ಮಾಡಿದ ಪ್ರಧಾನಿ ಮೋದಿ!

masthmagaa.com:

ಭಾರತಕ್ಕೆ ಎರಡು ದಿನದ ಪ್ರವಾಸದ ಮೇಲೆ ಬಂದಿರೋ ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ರನ್ನ ದೆಹಲಿಯಲ್ಲಿ ಇವತ್ತು ಪ್ರಧಾನಿ ಮೋದಿ ಸ್ವಾಗತಿಸಿದ್ರು. ಪ್ರವಾಸದ ಎರಡನೇ ದಿನವಾದ ಇಂದು ರಾಷ್ಟ್ರಪತಿ ಭವನದಲ್ಲಿ ಬೋರಿಸ್‌ಗೆ ಅದ್ದೂರಿ ಸ್ವಾಗತ ಕೋರಲಾಯ್ತು. ನಂತ್ರ ಮಾತಾಡಿದ ಬೋರಿಸ್‌ ಜಾನ್ಸನ್‌, ಈ ಅದ್ಭುತ ಸ್ವಾಗತಕ್ಕೆ ಧನ್ಯವಾದಗಳು. ಉಭಯ ದೇಶಗಳ ನಡುವಿನ ಸಂಬಂಧ ಯಾವತ್ತು ಇಷ್ಟು ಗಟ್ಟಿ ಇರ್ಲಿಲ್ಲ ಅಂತ ಹೇಳಿದ್ದಾರೆ. ತದನಂತ್ರ ಬ್ರಿಟನ್‌ ಪ್ರಧಾನಿ ರಾಜಘಟ್‌ನ ಮಹಾತ್ಮ ಗಾಂಧಿಜೀ ಅವ್ರ ಸ್ಮಾರಕಕ್ಕೆ ತೆರಳಿ ತಮ್ಮ ನಮನ ಸಲ್ಲಿಸಿದ್ದಾರೆ. ಅದಾದ್ಮೇಲೆ ವಿದೇಶಾಂಗ ಮಂತ್ರಿ ಎಸ್‌.ಜೈಶಂಕರ್‌ ಜೊತೆ ಮಾತುಕತೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply