ತನ್ನ ಮಗುವಿನ ತಾಯಿಯನ್ನ ಮದುವೆ ಆದ ಇಂಗ್ಲೆಂಡ್‌ ಪ್ರಧಾನಿ

masthmagaa.com:

ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಸೀಕ್ರೆಟ್ ಸಮಾರಂಭವೊಂದರಲ್ಲಿ ತಮ್ಮ ಗೆಳತಿ, ತಮ್ಮ ಮಗುವಿನ ತಾಯಿ ಕೇರಿ ಸೈಮಂಡ್ಸ್ ರನ್ನ ಮದುವೆಯಾಗಿದ್ದಾರೆ ಅಂತ ವರದಿಯಾಗಿದೆ. ಅಂದಹಾಗೆ 2019ರಲ್ಲಿ ಬೋರಿಸ್ ಜಾನ್ಸನ್ ಪ್ರಧಾನಿಯಾದಲ್ಲಿಂದಲೂ ಇವರಿಬ್ಬರೂ ರಿಲೇಷನ್​ಶಿಪ್​​ನಲ್ಲಿದ್ದು, ಕಳೆದ ವರ್ಷ ಮಗು ಕೂಡ ಜನಿಸಿದೆ. ಅದಕ್ಕೆ ವಿಲ್​​ಫ್ರೆಡ್​​ ಲಾವ್ರೀ ನಿಕೋಲಸ್ ಜಾನ್ಸನ್ ಅಂತ ಹೆಸರಿಟ್ಟಿದ್ಧಾರೆ. ಕಳೆದ ವರ್ಷವೇ ಈ ಜೋಡಿ ಮದುವೆಯಾಗೋದಾಗಿ ಘೋಷಿಸಿತ್ತು. ಬೋರಿಸ್​ ಜಾನ್ಸನ್​​ಗೆ 56 ವರ್ಷ ವಯಸ್ಸಾಗಿದ್ದು, ಸೈಮಂಡ್ಸ್​​ಗೆ 33 ವರ್ಷ ವಯಸ್ಸಾಗಿದೆ. ಬೋರಿಸ್ ಜಾನ್ಸನ್ ಈ ಹಿಂದೆ ಮರೀನಾ ವ್ಹೀಲರ್ ಅನ್ನೋರನ್ನ ಮದ್ವೆಯಾಗಿದ್ರು. ದಂಪತಿಗೆ ನಾಲ್ವರು ಮಕ್ಕಳು ಕೂಡ ಇದ್ರು. ಆದ್ರೆ 2018ರಲ್ಲಿ 25 ವರ್ಷದ ದಾಂಪತ್ಯದ ಬಳಿಕ ಬೋರಿಸ್ ಮತ್ತು ಮರೀನಾ ಡಿವೋರ್ಸ್​ ಪಡ್ಕೊಂಡು ಬೇರೆಯಾಗಿದ್ದರು. ಅದಕ್ಕೂ ಮುನ್ನ ಅಲ್ಲೆಗ್ರಾ ಮೋಸ್ಟಿನ್ ಒವೆನ್ ಅನ್ನೋರನ್ನ ಕೂಡ, ಬೋರಿಸ್ ಜಾನ್ಸನ್ ಮದ್ವೆಯಾಗಿದ್ರು. ಹೀಗಾಗಿ ಸೈಮಂಡ್ಸ್ ಅವರ 3ನೇ ಪತ್ನಿಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply