ಮುಂದಿನ ವರ್ಷ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮದ್ವೆ!

masthmagaa.com:

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅವರ ಫಿಯಾನ್ಸಿ ಕ್ಯಾರಿ ಸೈಮಂಡ್ಸ್​​ ಮುಂದಿನ ವರ್ಷ ಅಂದೆ್ರೆ 2022ರ ಜುಲೈ 30ರಂದು ಮದುವೆಯಾಗೋಕೆ ನಿರ್ಧರಿಸಿದ್ದಾರೆ. ಈಗಾಗಲೇ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಸದಸ್ಯರಿಗೆ ಮದುವೆ ಪತ್ರಿಕೆ ಕೂಡ ಕಳುಹಿಸಿದ್ಧಾರೆ. ಆದ್ರೆ ಮದುವೆಯಾಗೋ ಜಾಗದ ಬಗ್ಗೆ ಇನ್ನೂ ಕೂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಂದಹಾಗೆ 2019ರಲ್ಲಿ ಬೋರಿಸ್ ಜಾನ್ಸನ್ ಪ್ರಧಾನಿಯಾದಲ್ಲಿಂದಲೂ ಇವರಿಬ್ಬರೂ ರಿಲೇಷನ್​ಶಿಪ್​​ನಲ್ಲಿದ್ದು, ಕಳೆದ ವರ್ಷ ಮಗು ಕೂಡ ಜನಿಸಿದೆ. ಅದಕ್ಕೆ ವಿಲ್​​ಫ್ರೆಡ್​​ ಲಾವ್ರೀ ನಿಕೋಲಸ್ ಜಾನ್ಸನ್ ಅಂತ ಹೆಸರಿಟ್ಟಿದ್ಧಾರೆ. ಕಳೆದ ವರ್ಷವೇ ಈ ಜೋಡಿ ಮದುವೆಯಾಗೋದಾಗಿ ಘೋಷಿಸಿತ್ತು. ಬೋರಿಸ್​ ಜಾನ್ಸನ್​​ಗೆ 56 ವರ್ಷ ವಯಸ್ಸಾಗಿದ್ದು, ಸೈಮಂಡ್ಸ್​​ಗೆ 33 ವರ್ಷ ವಯಸ್ಸಾಗಿದೆ. ಬೋರಿಸ್ ಜಾನ್ಸನ್ ಈ ಹಿಂದೆ ಮರೀನಾ ವ್ಹೀಲರ್ ಅನ್ನೋರನ್ನ ಮದ್ವೆಯಾಗಿದ್ರು. ದಂಪತಿಗೆ ನಾಲ್ವರು ಮಕ್ಕಳು ಕೂಡ ಇದ್ರು. ಆದ್ರೆ 2018ರಲ್ಲಿ 25 ವರ್ಷದ ದಾಂಪತ್ಯದ ಬಳಿಕ ಬೋರಿಸ್ ಮತ್ತು ಮರೀನಾ ಡಿವೋರ್ಸ್​ ಪಡ್ಕೊಂಡು ಬೇರೆಯಾಗಿದ್ದರು. ಅದಕ್ಕೂ ಮುನ್ನ ಅಲ್ಲೆಗ್ರಾ ಮೋಸ್ಟಿನ್ ಒವೆನ್ ಅನ್ನೋರನ್ನ ಕೂಡ ಬೋರಿಸ್ ಜಾನ್ಸನ್ ಮದ್ವೆಯಾಗಿದ್ರು. ಹೀಗಾಗಿ ಸೈಮಂಡ್ಸ್ ಅವರ 3ನೇ ಪತ್ನಿಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply