ಬ್ರಿಟನ್‌ ಪ್ರಧಾನಿ ರೇಸ್‌ನಲ್ಲಿರೋ ರಿಷಿಯಿಂದ ಮತ್ತೊಂದು ಮಹತ್ವದ ಪ್ರತಿಜ್ಞೆ!

masthmagaa.com:

ಬ್ರಿಟನ್‌ ಪ್ರಧಾನಿ ರೇಸ್‌ನ ಅಂತಿಮ ಘಟ್ಟದಲ್ಲಿರೋ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್‌ ಸಾಲು ಸಾಲು ಮಹತ್ವದ ಪ್ರತಿಜ್ಞೆಗಳನ್ನ ಮಾಡ್ತಿದಾರೆ. ಇದೀಗ ಬ್ರಿಟನ್‌ನ ಲೈಂಗಿಕ ಅಪರಾಧಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ತೇನೆ ಅಂತ ಪ್ರತಿಜ್ಞೆ ಮಾಡಿದ್ದಾರೆ. ತಮ್ಮ ಚುನಾವಣಾ ಅಭಿಯಾನದ ಭಾಗವಾಗಿ ಮಾತನಾಡಿದ ರಿಷಿ, ʻಮಕ್ಕಳು ಮತ್ತು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡೋ ಗುಂಪುಗಳನ್ನ ಮಟ್ಟ ಹಾಕಿ, ಅವ್ರನ್ನ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಿಸ್ತೀನಿʼ ಅಂತ ಶಪಥ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply