ಬ್ರಿಟನ್ ಪ್ರಧಾನಿ ಪಟ್ಟ ಯಾರಿಗೆ? ಶೀಘ್ರದಲ್ಲೇ ಅನೌನ್ಸ್‌!

masthmagaa.com:

ಬ್ರಿಟನ್‌ನ ಪ್ರಧಾನಿ ಹುದ್ದೆಯ ಹಣಾಹಣಿ ಕಡೆಗೂ ಅಂತಿಮ ಹಾಗೂ ರೋಚಕ ಘಟ್ಟ ತಲುಪಿದೆ. ಮತದಾನ ಸೇರಿದಂತೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದು ಬೋರಿಸ್‌ ಜಾನ್ಸನ್‌ರ ಉತ್ತರಾಧಿಕಾರಿ ಕುರ್ಚಿ ಬ್ರಿಟನ್‌ನ ಹಾಲಿ ವಿದೇಶಾಂಗ ಸಚಿವೆ ಲಿಜ್‌ಟ್ರಸ್‌ಗೋ ಅಥವಾ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್‌ಕೋ ಅನ್ನೋ ಕುತುಹಲ ಮೂಡಿದೆ. ಸಮೀಕ್ಷೆ ಹಾಗೂ ಇನ್ನಿತರ ವರದಿಗಳ ಪ್ರಕಾರ ರಿಷಿ ಸುನಾಕ್‌ಗಿಂತ ಲಿಜ್‌ಟ್ರಸ್‌ ಮುನ್ನೆಡೆಯಲ್ಲಿದ್ದಾರೆ. ಬ್ರಿಟನ್‌ನ ಮುಂದಿನ ಪ್ರಧಾನಿ ಪಟ್ಟ ಲಿಜ್‌ಟ್ರಸ್‌ ಪಾಲಾಗೋದು ಬಹುತೇಕ ಖಚಿತವಾಗಿದೆ.

-masthmagaa.com

Contact Us for Advertisement

Leave a Reply