ಬ್ರಿಟನ್‌ ʻಸೇಫ್‌ ಸ್ಟೇಟ್ಸ್‌ʼ ಲಿಸ್ಟ್‌ಗೆ ಭಾರತ ಎಂಟ್ರಿ! ಏನಿದು ಸೇಫ್‌ ಸ್ಟೇಟ್ಸ್‌?

masthmagaa.com:

ವಿಪರೀತ ಅಕ್ರಮ ವಲಸಿಗರ ಸಮಸ್ಯೆಯನ್ನ ಅನುಭವಿಸುತ್ತಿರೋ, ಬ್ರಿಟನ್‌ ಇದೀಗ ತನ್ನ ʻಸೇಫ್‌ ಸ್ಟೇಟ್ಸ್‌ʼ ಪಟ್ಟಿಯಲ್ಲಿ ಭಾರತವನ್ನ ಸೇರಿಸೋದಾಗಿ ಘೋಷಿಸಿದೆ. ಅಂದ್ಹಾಗೆ ಸೇಫ್‌ ಸ್ಟೇಟ್ಸ್‌ ಲಿಸ್ಟ್‌ ಅಂದ್ರೆ, ಸುರಕ್ಷಿತ ದೇಶಗಳ ಪಟ್ಟಿ ಎಂದರ್ಥ. ಈ ಲಿಸ್ಟ್‌ಗೆ ಸೇರಿಸಲಾದ ದೇಶಗಳನ್ನ ಬ್ರಿಟನ್‌ ಸರ್ಕಾರ ತುಂಬಾ ಸೇಫ್‌ ಅಂತ ಪರಿಗಣಿಸುತ್ತೆ. ಅಂದ್ರೆ ಇಂತಹ ದೇಶಗಳಲ್ಲಿ ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗದ, ಭದ್ರವಾದ ದೇಶ ಅಂತ ಹೇಳಲಾಗುತ್ತೆ. ಆದ್ರಿಂದ ಈ ಸೇಫ್‌ ಸ್ಟೇಟ್ಸ್‌ ಲಿಸ್ಟ್‌ನಲ್ಲಿರೋ ದೇಶಗಳ ಪ್ರಜೆಗಳು ಅಕ್ರಮವಾಗಿ ಬ್ರಿಟನ್‌ಗೆ ಎಂಟ್ರಿ ಕೊಟ್ರೆ, ಅವ್ರನ್ನ ಒಂದು ಅರೆಸ್ಟ್‌ ಮಾಡಲಾಗುತ್ತೆ. ಇಲ್ಲಾ ವಾಪಾಸ್‌ ತಮ್ಮ ದೇಶಕ್ಕೆ ಕಳುಹಿಸಲಾಗುತ್ತೆ. ಇಲ್ಲಾ ಆದ್ರೆ ಸೇಫ್‌ ಸ್ಟೇಟ್ಸ್‌ ಲಿಸ್ಟ್‌ನಲ್ಲಿ ಇಲ್ಲದ ದೇಶಗಳ ಪ್ರಜೆಗಳು ಅಕ್ರಮವಾಗಿ ಬ್ರಿಟನ್‌ ಸೇರಿದ್ರೆ, ಅಂತವ್ರಿಗೆ ಬ್ರಿಟನ್‌ ಸರ್ಕಾರ ಅಶ್ರಯ ನೀಡೋ ಕೆಲಸ ಮುಂದುವರೆಸುತ್ತೆ. ಇದೀಗ ಬ್ರಿಟನ್‌ಗೆ ಅಕ್ರಮವಾಗಿ ನುಗ್ಗೋರ ಪಟ್ಟಿಯಲ್ಲಿ ಭಾರತೀಯ ಪ್ರಜೆಗಳ ಪಾಲು ಕೂಡ ಇರೋ ಕಾರಣ ಅಲ್ಲಿನ ಸರ್ಕಾರ ಈ ನಿರ್ಧಾರವನ್ನ ಮಾಡಿದೆ. ಅಂದ್ಹಾಗೆ ಬ್ರಿಟನ್‌ ಇಲ್ಲಿಯವರೆಗೆ ತನ್ನ ʻಸೇಫ್‌ ಸ್ಟೇಟ್ಸ್‌ʼ ಲಿಸ್ಟ್‌ನಲ್ಲಿ ಇಲ್ಲದಿರೋ ದೇಶದ ಅಕ್ರಮ ವಲಸಿಗರಿಗೆ ಆಶ್ರಯ ನೀಡ್ತಾ ಬಂದಿತ್ತು. ಆದ್ರೆ ಅಕ್ರಮ ವಲಸಿಗರು ಹೆಚ್ಚಾಗ್ತಾ ಇರೋದ್ರಿಂದ ಬೇಸತ್ತ ಬ್ರಿಟನ್‌ ಸರ್ಕಾರ ಭಾರತವನ್ನೂ ಸೇಫ್‌ ಸ್ಟೇಟ್ಸ್‌ ಲಿಸ್ಟ್‌ಗೆ ಸೇರಿಸಿಕೊಂಡಿದೆ. ಅಂದ್ಹಾಗೆ ಈ ಬಾರಿ ಬ್ರಿಟನ್‌ನ ಸೇಫ್‌ ಸ್ಟೇಟ್ಸ್‌ ಲಿಸ್ಟ್‌ನಲ್ಲಿ ಭಾರತದ ಜೊತೆ ಜಾರ್ಜಿಯ ದೇಶವನ್ನ ಕೂಡ ಸೇರಿಸಲಾಗಿದೆ. ಇನ್ನು ಈ ಲಿಸ್ಟ್‌ನಲ್ಲಿ ಅಲ್ಬೇನಿಯ, ಸ್ವಿಟ್ಸರ್ಲೆಂಡ್‌, ಯುರೋಪಿಯನ್‌ ಯೂನಿಯನ್‌ ಮತ್ತು ಯುರಪಿಯನ್‌ ಎಕನಾಮಿಕ್‌ ಏರಿಯಾಗೆ ಒಳಗೊಂಡಿರೋ ರಾಷ್ಟ್ರಗಳೂ ಇವೆ.

-masthmagaa.com

Contact Us for Advertisement

Leave a Reply