UKನಲ್ಲಿ ಶಿಕ್ಷಣ ಪಡೆಯಲು ಭಾರತೀಯರ ರೇಸ್‌!

masthmagaa.com:

ಸ್ನಾತಕ ಪದವಿಗಾಗಿ ಬ್ರಿಟನ್‌ ವಿಶ್ವವಿದ್ಯಾಲಯಗಳಿಗೆ ದಾಖಲೆ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಶೈಕ್ಷಣಿಕ ಅವಧಿ ಸೆಪ್ಟಂಬರ್‌ನಿಂದ ಶುರುವಾಗಲಿದ್ದು, ಉನ್ನತ ಶಿಕ್ಷಣಕ್ಕಾಗಿ ಇದುವರೆಗೆ 8,660 ಅರ್ಜಿಗಳು ಬಂದಿವೆ ಅಂತ ಬ್ರಿಟನ್‌ನ ಯುನಿವರ್ಸಿಟೀಸ್‌ ಆಂಡ್‌ ಕಾಲೇಜ್‌ಸ್‌ ಅಡ್ಮಿಷನ್ಸ್‌ ಸರ್ವೀಸಸ್‌ ಹೇಳಿದೆ. ಇದು ಕಳೆದ ವರ್ಷಕ್ಕಿಂತ 11% ಹೆಚ್ಚು. ನರ್ಸಿಂಗ್‌ ಸ್ಟಡೀಸ್‌ ವಿಭಾಗದಲ್ಲಿ ಪ್ರವೇಶಾತಿ ಅರ್ಜಿಗಳು ಗಣನೀಯವಾಗಿ ಹೆಚ್ಚಾಗಿವೆ. ಇದು ಪ್ಯಾಂಡಮಿಕ್‌ ನಂತರ ಆ ವೃತ್ತಿಯ ಮಹತ್ವ ಹೆಚ್ಚಾಗಿರುವದನ್ನು ತೋರಿಸುತ್ತದೆ ಅಂತ UCASನ ಅಧಿಕಾರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply