ಗಡಿಯಲ್ಲಿ ರಷ್ಯಾ ಸೇನೆ ಹೆಚ್ಚಳ! ಯುಕ್ರೇನ್ ಹೇಳಿದ್ದೇನು?

masthmagaa.com:

ಯುಕ್ರೇನ್ ಗಡಿಯಲ್ಲಿ ರಷ್ಯಾ ಮಿಲಿಟರಿ ನಿಯೋಜನೆಯನ್ನು ಹೆಚ್ಚಿಸುತ್ತಿದೆ. ಇದ್ರಿಂದ ರಷ್ಯಾ ಪರ ಹೋರಾಟಗಾರರ ಉಪಟಳ ಹೆಚ್ಚಬಹುದು ಅಂತ ವರದಿಯಾಗಿತ್ತು. ಆದ್ರೆ ಇದನ್ನು ಯುಕ್ರೇನ್ ನಿರಾಕರಿಸಿದೆ. ರಷ್ಯಾ ತನ್ನ ಪೂರ್ವ ಗಡಿಯಲ್ಲಿ ಯಾವುದೇ ರೀತಿಯ ಸೇನೆ ನಿಯೋಜನೆ ಹೆಚ್ಚಿಸುತ್ತಿಲ್ಲ ಅಂತ ಹೇಳಿದೆ. ಯುಕ್ರೇನ್ ರಕ್ಷಣಾ ಸಚಿವ ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ಬಿಡುಗಡೆಯಾಗಿದೆ. ಅಂದಹಾಗೆ ಯುಕ್ರೇನ್​ ಈಶಾನ್ಯ ಭಾಗ ರಷ್ಯಾ ಗಡಿ ಜೊತೆ ಕೂಡಿಕೊಂಡಿದೆ. ಇಲ್ಲಿ ರಷ್ಯನ್ನರು ಹೆಚ್ಚಾಗಿದ್ದು, ರಷ್ಯಾ ಪರ ಹೋರಾಟಗಳು, ಗಲಾಟೆಗಳು ನಡೀತಾ ಇರುತ್ತವೆ.

-masthmagaa.com

Contact Us for Advertisement

Leave a Reply