ಯುಕ್ರೇನ್‌ ಸೇನೆಗೆ ಸೇರೊ ಸೈನಿಕರ ಏಜ್‌ ಲಿಮಿಟ್‌ 25ಕ್ಕೆ ಇಳಿಕೆ!

masthmagaa.com:

ರಷ್ಯಾದ ತೀವ್ರ ದಾಳಿಯಿಂದ ನಲುಗ್ತಿರೋ ಯುಕ್ರೇನ್‌ ಇದೀಗ ತನ್ನ ಸೇನಾ ಬಲ ಹೆಚ್ಚಿಸೋಕೆ ಹೊಸ ತಂತ್ರ ಹೂಡಿದೆ. ಸೇನೆಗೆ ಸೇರುವ ಏಜ್‌ ಅಥ್ವಾ ವಯಸ್ಸನ್ನ ಇನ್ನೂ ಕಡಿಮೆ ಮಾಡಿದೆ. ಅಂದ್ರೆ ಈ ಹಿಂದೆ 27 ವರ್ಷವಾದ್ರೆ ಯುಕ್ರೇನಿಗರು ಸೇನೆಗೆ ಖಡ್ಡಾಯವಾಗಿ ರಿಜಿಸ್ಟರ್‌ ಮಾಡ್ಕೊಬೇಕಿತ್ತು. ಆದ್ರೆ ಈಗ…ಏಜ್‌ ಲಿಮಿಟ್‌ನ್ನ 25ಕ್ಕೆ ಇಳಿಸಲಾಗಿದೆ. ಹೀಗಾಗಿ ಇನ್ಮೇಲೆ 25 ವರ್ಷ ತುಂಬಿದ ಯುಕ್ರೇನಿಗರು ಯುದ್ಧ ಭೂಮಿಯಲ್ಲಿ ರಷ್ಯಾ ಜೊತೆ ಕಾದಾಡಲು ಸಜ್ಜಾಗ್ಬೇಕು. ಎಷ್ಟು ಸಂಖ್ಯೆಯಲ್ಲಿ ಹೊಸ ಸೈನಿಕರನ್ನ ನೇಮಿಸಲಾಗುತ್ತೆ ಅನ್ನೊ ಬಗ್ಗೆ ಯುಕ್ರೇನ್‌ ಸೇನಾ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಈ ಹೊಸ ಕಾನೂನನ್ನ ಕಳೆದ ವರ್ಷ ಯುಕ್ರೇನ್‌ ಪಾರ್ಲಿಮೆಂಟ್‌ಲ್ಲಿ ಪಾಸ್‌ ಮಾಡಲಾಗಿತ್ತು. ಇದೀಗ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವ್ರು ಸೈನ್‌ ಮಾಡಿ ಹೊಸ ಕಾನೂನು ಜಾರಿಗೊಳಿಸಿದ್ದಾರೆ.

-masthmagaa.com

Contact Us for Advertisement

Leave a Reply