‘ರಷ್ಯಾದವ್ರು ನನ್ನನ್ನ ಹಿಡಿಯೋಕೆ ಬಂದಿದ್ರು’: ಯುಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ

masthmagaa.com:

ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ ಪಡೆಗಳು ನನ್ನನ್ನ ಮತ್ತು ನನ್ನ ಕುಟುಂಬವನ್ನ ಸೆರೆಹಿಡಿಯೋಕೆ ಒಂದ್ಸರಿ ತುಂಬಾ ಹತ್ರ ಬಂದಿದ್ರು ಅಂತ ಹೇಳಿದ್ದಾರೆ. ಇತ್ತೀಚಿನ ಇಂಟರ್‌ವಿವ್ಯೂ ಒಂದ್ರಲ್ಲಿ ಮಾತಾಡಿರೋ ಅವ್ರು ಯುಕ್ರೇನ್ ಯುದ್ಧದ ಆರಂಭಿಕ ದಿನಗಳನ್ನ ನೆನಸ್ಕೊಂಡು ಈ ಹೇಳಿಕೆಯನ್ನ ನೀಡಿದ್ದಾರೆ. ಫೆಬ್ರವರಿ 24 ರಂದು ರಷ್ಯಾ ಆಕ್ರಮಣ ಮಾಡಿದ ಸ್ವಲ್ಪ ಹೊತ್ತಿನಲ್ಲೆ ಝೆಲೆನ್ಸ್ಕಿಅವ್ರು ಟಾರ್ಗೆಟ್‌ ಅಂತ ಮಾಹಿತಿ ಸ್ಪಷ್ಟ ಇತ್ತು. ಹಾಗೂ ಅವ್ರನ್ನ ಮತ್ತು ಅವ್ರ ಕುಟುಂಬವನ್ನ ಕೊಲ್ಲೋಕೆ ಅಥ್ವಾ ಸೆರೆಹಿಡಿಯೋಕೆ ರಷ್ಯಾದ ಸ್ಟ್ರೈಕ್‌ ಪಡೆಗಳು ಕಿಯವ್‌ಗೆ ಧುಮುಕಿದ್ದಾರೆ ಅಂತ ಖುದ್ದು ಝೆಲೆನ್ಸ್ಕಿಗೂ ಮಾಹಿತಿ ಇತ್ತು. ಸೋ, ಆ ದಿನ ನಡೆದ ದಾಳಿಯಲ್ಲಿ ಗಾರ್ಡ್‌ಗಳು ತಮ್ಮನ್ನ ಕಾಪಾಡಿದ್ರು ಅಂತ ಝೆಲೆನ್ಸ್ಕಿ ಸಂದರ್ಶನ ವೇಳೆ ನೆನಪಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply