ಯುಕ್ರೇನ್‌ ಮೇಲೆ ರಷ್ಯಾ ಯುದ್ಧ : ಯುಕ್ರೇನ್‌ ಅಧ್ಯಕ್ಷ ಹೇಳಿದ್ದೇನು?

masthmagaa.com:

ಬುಧವಾರ ರಾತ್ರಿ ಮತ್ತು ಗುರುವಾರ ಮುಂಜಾನೆ ರಷ್ಯಾ ದಾಳಿ ಮಾಡುತ್ತೆ ಅನ್ನೋ ಅನುಮಾನ ಯುಕ್ರೇನ್​, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಮೊದಲೇ ಇತ್ತು. ಹೀಗಾಗಿಯೇ ಯುಕ್ರೇನ್​ನಲ್ಲಿ ಬುಧವಾರನೇ ತುರ್ತುಪರಿಸ್ಥಿತಿ ಘೋಷಿಸಲಾಗಿತ್ತು. ಅಲ್ಲದೆ ಬುಧವಾರ ತಡರಾತ್ರಿ ದೇಶವನ್ನುದ್ದೇಶಿಸಿ ಯುಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್​ಕಿ ಮಾತನಾಡಿದ್ರು. ಅದರಲ್ಲಿ, ಯುರೋಪ್​​ನಲ್ಲಿ ರಷ್ಯಾ ಯುದ್ಧವನ್ನ ಆರಂಭ ಮಾಡ್ಬೋದು. ಸುಮಾರು ಎರಡು ಲಕ್ಷ ರಷ್ಯಾ ಯೋಧರು ಯುಕ್ರೇನ್​ ಗಡಿಯಲ್ಲಿದ್ದಾರೆ. ಯುಕ್ರೇನಿಯನ್ನರನ್ನ ರಷ್ಯನ್ನರಾಗಿ ಪರಿವರ್ತಿಸೋ ಕೆಲಸ ನಡೀತಿದೆ. ಇದನ್ನ ರಷ್ಯನ್ನರು ವಿರೋಧಿಸಬೇಕು. ಯುದ್ಧವನ್ನ ತಡೀಬೇಕು ಅಂತ ಭಾವನಾತ್ಮಕವಾಗಿ ರಿಕ್ವೆಸ್ಟ್​ ಮಾಡ್ಕೊಂಡ್ರು ಝೆಲೆನ್ಸ್ಕಿ. ಜೊತೆಗೆ ಯುದ್ಧ ತಡೆಯೋ ಕೊನೇ ಪ್ರಯತ್ನವಾಗಿ ರಾತ್ರಿನೇ ಪುಟಿನ್​ ಜೊತೆ ಫೋನ್ ಮೂಲಕ ಮಾತನಾಡೋಕೆ ಟ್ರೈ ಮಾಡ್ದೆ. ಆದ್ರೆ ಆ ಕಡೆಯಿಂದ ಯಾವ್ದೇ ಪ್ರತಿಕ್ರಿಯೆ ಬರಲಿಲ್ಲ. ಪುಟಿನ್​ ಜೊತೆ ಮಾತುಕತೆ ಸಾಧ್ಯವಾಗಲಿಲ್ಲ ಅಂತೇಳಿದ್ರು. ಜೊತೆಗೆ ಮಾರ್ಷಲ್​ ಲಾ ಆದೇಶಕ್ಕೆ ಝೆಲೆನ್ಸ್​ಕಿ ಸಹಿ ಹಾಕಿದ್ದಾರೆ. ಅಂದ್ರೆ ಇಡೀ ಯುಕ್ರೇನ್​​ ಈಗ ಯುಕ್ರೇನ್​ ಸೇನೆಯ ನಿಯಂತ್ರಣಕ್ಕೆ ಬಂದಿದೆ. ಇನ್ನು ಬುಧವಾರ ರಾತ್ರಿನೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಝೆಲೆನ್ಸ್​ಕಿಗೆ ಕಾಲ್​ ಮಾಡಿ ಮಾತನಾಡಿಸಿದ್ದಾರೆ. ಈ ವೇಳೆ ಪುಟಿನ್​ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಬೈಡನ್​ ಮಾತ್ರ ಅಂತಲ್ಲ ಅಮೆರಿಕದ ಮಿತ್ರ ರಾಷ್ಟ್ರಗಳು ಕೂಡ ಯುಕ್ರೇನ್​ ಮೇಲೆ ರಷ್ಯಾ ನಡೆಸಿರೋ ಆಕ್ರಮಣವನ್ನ ತೀವ್ರವಾಗಿ ಖಂಡಿಸಿದ್ದಾರೆ.

-masthmagaa.com

Contact Us for Advertisement

Leave a Reply