ಉಕ್ರೇನ್​ನಲ್ಲಿ ರಷ್ಯನ್ ಸೈನಿಕರಿಂದ ಹೇಯಕೃತ್ಯ!

masthmagaa.com:

ಯುಕ್ರೇನ್​ನಲ್ಲಿ ರಷ್ಯನ್ ಸೈನಿಕರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡ್ತಿದ್ದಾರೆ ಅಂತ ಸಂಸದೆಯೊಬ್ಬರು ಆರೋಪಿಸಿದ್ದಾರೆ. ವಿಪಕ್ಷ ಹೋಲೋಸ್ ಪಕ್ಷದ ಲೆಸಿಯಾ ವಾಸಿಲೆಂಕೋ ಮಾತನಾಡಿ, ರಷ್ಯನ್ ಸೈನಿಕರ ದಾಳಿಯ ಬಳಿಕ ಸುಮಾರು 60ಕ್ಕೂ ಹೆಚ್ಚು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ಧಾರೆ. ರಾಜಧಾನಿ ಕಿಯೆವ್ ಬಿಟ್ಟು ಹೋಗಲಾರದೇ ಅಲ್ಲೇ ಉಳಿದುಕೊಂಡಿರೋ ಮಹಿಳೆಯರ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಯುದ್ಧ ತಂತ್ರವನ್ನು ಬದಲಿಸಿದ್ದಾರೆ. ಈ ಮಕ್ಕಳು ಮತ್ತು ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗ್ತಿದೆ. ಹಲವು ಮಹಿಳೆಯರನ್ನು ರಷ್ಯನ್ ಸೈನಿಕರು ಅತ್ಯಾಚಾರ ಎಸಗಿ ಗಲ್ಲಿಗೇರಿಸಿದ್ರೆ, ಇನ್ನು ಕೆಲ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದ ಬಳಿಕ ತಾವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ ದೌರ್ಜನ್ಯಕ್ಕೆ ಒಳಗಾದವರು ಮತ್ತವರ ಕುಟುಂಬಸ್ಥರು ಮುಂದೆ ಬಂದು ಹೇಳಿಕೊಳ್ತಿಲ್ಲ ಅಷ್ಟೆ. ನಾವು ಯುಕ್ರೇನ್​ನಲ್ಲಿ ನಡೀತಿರೋ ಯುದ್ಧ ಅಪರಾಧಗಳ ಸಂಬಂಧ ಸಾಕ್ಷ್ಯ ಸಂಗ್ರಹಕ್ಕೆ ಪ್ರಯತ್ನಿಸ್ತಿದ್ದೀವಿ. ಇಂಥಾ ಸಂತ್ರಸ್ಥರಿಗೆ ಬ್ರಿಟನ್ ಸರ್ಕಾರ ಮಾನವೀಯ ನೆರವು ನೀಡ್ತಿದ್ದು, ಪುಟಿನ್ ವಿರುದ್ಧ ಯುದ್ಧ ಅಪರಾಧಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಕ್ಕೂ ಸೂಚಿಸಿದೆ ಅಂತ ಹೇಳಿಕೊಂಡಿದ್ದಾರೆ ಸಂಸದೆ ಲೆಸಿಯಾ ವಾಸಿಲೆಂಕೋ.

-masthmagaa.com

Contact Us for Advertisement

Leave a Reply