ಯುಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ! ವಿದ್ಯುತ್‌ ಖಡಿತದ ಎಚ್ಚರಿಕೆ!

masthmagaa.com:

ಯುಕ್ರೇನ್‌ನ ಎನರ್ಜಿ ಯೂನಿಟ್‌ಗಳ ಮೇಲೆ ರಷ್ಯಾ ಭೀಕರ ದಾಳಿ ನಡೆಸಿದೆ. ಪರಿಣಾಮ ಸ್ಟ್ರೈ ಮತ್ತು ಚೆರ್ವೊನೊಹ್ರಾಡ್‌ ಜಿಲ್ಲೆಯಲ್ಲಿ ವಿದ್ಯುತ್‌ ಯೂನಿಟ್‌ಗಳಲ್ಲಿ ಬೆಂಕಿ ಉಂಟಾಗಿದೆ. ಸದ್ಯ ಯಾವ್ದೇ ರೀತಿ ಸಾವು-ನೋವುಗಳು ವರದಿಯಾಗಿಲ್ಲ. ರಷ್ಯಾ ರಾತ್ರೋರಾತ್ರಿ ಯುಕ್ರೇನ್‌ನ ಈ ಇನ್ಫ್ರಾಸ್ಟ್ರಕ್ಷರ್‌ಗಳ ಮೇಲೆ ಸುಮಾರು 50 ಕ್ಷಿಪಣಿಗಳು ಮತ್ತು 20 ಡ್ರೋನ್‌ ದಾಳಿ ನಡೆಸಿತ್ತು. ಆಗ ಈ ಘಟನೆ ಸಂಭವಿಸಿದೆ. ಈ ಬೆನ್ನಲ್ಲೇ ಯುಕ್ರೇನ್‌ ಸರ್ಕಾರ ತನ್ನೆಲ್ಲಾ ಪ್ರಜೆಗಳಿಗೆ, ಇಡೀ ಯುಕ್ರೇನ್‌ನಲ್ಲಿ ವಿದ್ಯುತ್‌ ಸಂಪರ್ಕ ಖಡಿತವಾಗೋ ಸಾಧ್ಯತೆಯಿದೆ ಅಂತ ಎಚ್ಚರಿಕೆ ನೀಡಿದೆ.

-masthmagaa.com

Contact Us for Advertisement

Leave a Reply