ಯುಕ್ರೇನ್ ಆಳೋ ತಾಕತ್ತು ರಷ್ಯಾಗಿಲ್ಲ: ಝೆಲೆನ್​ಸ್ಕಿ ಕಿಡಿ

masthmagaa.com:

ಯುಕ್ರೇನ್ ರಾಜಧಾನಿ ಕಿಯೆವ್​ನಲ್ಲಿ ತನ್ನ ತಾಯಿಗೆ ಔಷಧಿ ತರಲು ಹೊರಟಿದ್ದ ಮಹಿಳೆ ಮತ್ತ ಇತರರನ್ನು ಗುರಿಯಾಗಿಸಿ ರಷ್ಯನ್ ಸೇನೆ ದಾಳಿ ನಡೆಸಿದೆ. ಮೃತ ಮಹಿಳೆಯನ್ನು ವಲೇರಿಯಾ ಮಾಕ್ಸೆಟ್​​ಸ್ಕಾ ಅಂತ ಗುರುತಿಸಲಾಗಿದೆ. ಈಕೆ ಯುಎಸ್​​​ಎಐಡಿ ಅಂದ್ರೆ ಯುನೈಟೆಡ್ ಸ್ಟೇಟ್ಸ್​ ಏಜೆನ್ಸಿ ಫರ್ ಇಂಟರ್​ನ್ಯಾಷನಲ್ ಡೆವೆಲಪ್​ಮೆಂಟ್ಸ್​​ನ ಪಾಲುದಾರ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ರು ಅಂತ ಕೂಡ ಗೊತ್ತಾಗಿದೆ. ಇವರು ತನ್ನ ಅನಾರೋಗ್ಯಪೀಡಿತ ತಾಯಿ ಮತ್ತು ಡ್ರೈವರ್ ಜೊತೆ ಸಾಗುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಯಲ್ಲಿ ಮೂರೂ ಜನ ಪ್ರಾಣ ಕಳ್ಕೊಂಡಿದ್ದಾರೆ ಅಂತ ಯುಎಸ್​​ಎಐಡಿ ಸಂಸ್ಥೆಯ ಮುಖ್ಯಸ್ಥೆ ಸಮಂತಾ ಪವಾರ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply