ಸರೆಂಡರ್ ಆಗೋ ಮಾತೇ ಇಲ್ಲ: ರಷ್ಯಾಗೆ ಯುಕ್ರೇನ್ ತಿರುಗೇಟು

masthmagaa.com:

ಮಾರಿಯೋಪೌಲ್‌ನ ಸರೆಂಡರ್‌ ಮಾಡಿ ಅನ್ನೋ ರಷ್ಯಾದ ಕೊನೆ ಎಚ್ಚರಿಕೆಯನ್ನ ಯುಕ್ರೇನ್‌ ತಿರಸ್ಕರಿಸಿದೆ ಅಂತ ಉಪಪ್ರಧಾನಿ ಇರಿನಾ ವೆರೆಶುಕ್‌ ಹೇಳಿದ್ದಾರೆ. ನೆನ್ನೆ ತಡರಾತ್ರಿ ರಷ್ಯಾ ಮಾರಿಯೋಪೌಲ್‌ನ ರಕ್ಷಣೆ ಮಾಡ್ತಾ ಇರೋರಿಗೆ ಶರಣಾಗತರಾಗಿ ಅಂತ ಕೊನೆ ಎಚ್ಚರಿಕೆ ನೀಡಿತ್ತು. ಈಗ ಅದಕ್ಕೆ ಪ್ರತಿಕ್ರಿಯಿಸಿರೋ ಉಪಪ್ರಧಾನಿ ಇರಿನಾ, ಆಯುಧಗಳನ್ನ ಸರೆಂಡರ್‌ ಮಾಡೋ ಮಾತೇ ಇಲ್ಲ, ಅದನ್ನ ಆಲ್‌ರೆಡಿ ನಾವು ರಷ್ಯಾಗೆ ತಿಳಿಸಿದಿವಿ ಅಂತ ಹೇಳಿದ್ದಾರೆ. ಇನ್ನು ರಷ್ಯಾ ಮುತ್ತಿಗೆ ಹಾಕಿರೋ ಮಾರಿಯೋಪೌಲ್‌ ನಗರದ ಸಾವಿರಾರು ನಿವಾಸಿಗಳನ್ನ ಬಲವಂತವಾಗಿ ರಷ್ಯಾಗೆ ಡಿಪೋರ್ಟ್‌ ಮಾಡಲಾಗಿದೆ ಅಂತ ವಿಶ್ವಸಂಸ್ಥಗೆ ಅಮೇರಿಕದ ರಾಯಭಾರಿ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಹೇಳಿದ್ದಾರೆ. ಸಿಎನ್‌ಎನ್‌ನ ʼಸ್ಟೇಟ್‌ ಆಫ್‌ ದ ಯೂನಿಯನ್‌ʼ ಕಾರ್ಯಕ್ರಮದಲ್ಲಿ ಮಾತಾಡಿರೋ ಅವ್ರು, ಈ ಮಾಹಿತಿಯನ್ನ ಬರೀ ನಾನು ಕೇಳಿಸಿಕೊಂಡಿದ್ದೀನಿ, ಖಾತ್ರಿ ಪಡಿಸಿಲ್ಲ. ಆದ್ರೆ ಇದು ಡಿಸ್ಟರ್ಬಿಂಗ್‌, ರಷ್ಯಾ ಯುಕ್ರೇನ್‌ ಪ್ರಜೆಗಳನ್ನ ಬಲವಂತವಾಗಿ ರಷ್ಯಾಗೆ ನೂಕಿ ಅಲ್ಲಿ ಅವ್ರನ್ನ ಕಾನ್‌ಸೆಂಟ್ರೇಷನ್‌ ಮತ್ತು ಪ್ರಿಸನರ್‌ ಕ್ಯಾಂಪ್‌ಗಳಿಗೆ ಹಾಕೋದು ನ್ಯಾಯವಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply