ಮರಿಯೋಪೋಲ್​ ಕಂಟ್ರೋಲ್​​ಗೆ ತಗೊಳ್ತಾ ರಷ್ಯಾ?

masthmagaa.com:

ಯುಕ್ರೆನ್ ರಷ್ಯಾದ ಯುದ್ಧ ನೌಕೆ ಮುಳುಗಿಸಿದ ಬಳಿಕ ಪುಟಿನ್ ಪಡೆ ಫುಲ್ ಕೆರಳಿದ್ದು, ದಾಳಿಯನ್ನು ತೀವ್ರಗೊಳಿಸಿದೆ. ರಾಜಧಾನಿ ಕಿಯೆವ್​ನಲ್ಲಿ ಕ್ಷಿಪಣಿಯ ಮಳೆ ಸುರಿಸಲು ಶುರು ಮಾಡಿದೆ. ಅದೇ ರೀತಿ ಬಂದರುನಗರ ಮರಿಯೋಪೋಲ್​ನಲ್ಲೂ ದಾಳಿ ತೀವ್ರಗೊಳಿಸಿದೆ. ಈ ನಡುವೆ ಪ್ರತಿಕ್ರಿಯಿಸಿರೋ ರಷ್ಯಾ, ಮರಿಯೋಪೋಲ್​ ನಗರ ಫುಲ್ ಕಂಟ್ರೋಲ್​ಗೆ ಬಂದಿದೆ. ಫುಲ್ ಕ್ಲಿಯರ್ ಮಾಡ್ಕೊಂಡಿದ್ದೀವಿ. ನಗರದ ಸಣ್ಣ ಭಾಗದಲ್ಲಷ್ಟೇ ಯುಕ್ರೇನ್​ ಸೈನಿಕರು ಇನ್ನೂ ಇದ್ದಾರೆ ಅಂತ ರಷ್ಯಾದ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಯುಕ್ರೇನ್ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು, ಜೀವ ಉಳಿಸಿಕೊಳ್ಳಬೇಕು ಅಂತ ಕೂಡ ವಾರ್ನಿಂಗ್ ಕೊಟ್ಟಿದೆ. ಒಂದ್ವೇಳೆ ಮರಿಯೋಪೋಲ್ ರಷ್ಯಾ ಕಂಟ್ರೋಲ್​ಗೆ ಬಂದ್ರೆ ಫೆಬ್ರವರಿ 24ರಂದು ಈ ಯುದ್ಧ ಶುರುವಾದಲ್ಲಿಂದ ಇಲ್ಲಿಯವರೆಗೆ ರಷ್ಯಾ ಕೈವಶವಾದ ಯುಕ್ರೇನ್​​ನ ದೊಡ್ಡ ನಗರವಾಗಲಿದೆ. ಆದ್ರೆ ಈ ಬಗ್ಗೆ ಯುಕ್ರೇನ್ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಆದ್ರೆ ಮರಿಯೋಪೋಲ್​ನಲ್ಲಿರೋ ಯುಕ್ರೇನ್ ಸೈನಿಕರನ್ನು ಕಂಪ್ಲೀಟಾಗಿ ಹತ್ಯೆ ಮಾಡಿದ್ರೆ, ರಷ್ಯಾ ಜೊತೆಗಿನ ಮಾತುಕತೆ ಕಂಪ್ಲೀಟಾಗಿ ಕೊನೆಯಾಗುತ್ತೆ. ಆಮೇಲೆ ಯಾವುದೇ ರೀತಿಯ ಚರ್ಚೆ ನಡೆಯಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply