ಯುಕ್ರೇನ್‌ಗೆ ಪೋಲೆಂಡ್‌ ನೆರವು! ಝೆಲೆನ್ಸ್ಕಿಗೆ ಉನ್ನತ ಗೌರವ ನೀಡಿ ಸತ್ಕಾರ!

masthmagaa.com:

ಕಳೆದ 13 ತಿಂಗಳಿನಿಂದ ರಷ್ಯಾ ದಾಳಿಯನ್ನ ಎದುರಿಸ್ತಾ ಬಂದಿರೊ ಯುಕ್ರೇನ್‌ಗೆ ಇದೀಗ ನ್ಯಾಟೋದ ಸದಸ್ಯ ರಾಷ್ಟ್ರ ಪೋಲೆಂಡ್‌ ಹೆಲ್ಪ್‌ ಮಾಡೋಕೆ ಮುಂದಾಗಿದೆ. ಪೋಲೆಂಡ್‌ಗೆ ಯುಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್ಸ್ಕಿ ಭೇಟಿ ನೀಡಿದ್ದಾರೆ. ಈ ವೇಳೆ ಯುಕ್ರೇನ್‌ಗೆ 14 ಸೋವಿಯತ್‌ ನಿರ್ಮಿತ ಮಿಗ್-29‌ ಫೈಟರ್‌ ಜೆಟ್‌ಗಳ ಸೇನಾ ನೆರವು ನೀಡೋದಾಗಿ ಪೋಲೆಂಡ್‌ ಅಧ್ಯಕ್ಷ ಆಂಡ್ರಜೇಜ್‌ ದುದಾ ಮಾತು ಕೊಟ್ಟಿದ್ದಾರೆ. ಅಲ್ದೇ ಇದೇ ವೇಳೆ ಪೋಲೆಂಡ್‌ನ ಅತ್ಯುನ್ನತ ಪ್ರಶಸ್ತಿ ʻವೈಟ್‌ ಈಗಲ್‌ʼನ್ನ ಝೆಲೆನ್ಸ್ಕಿಗೆ ನೀಡಿ ಗೌರವಿಸಿದ್ದಾರೆ. ಗೌರವ ಸ್ವೀಕರಿಸಿದ ಬಳಿಕ ಮಾತಾಡಿದ ಝೆಲೆನ್ಸ್ಕಿ, ನೀವು ಹೆಗಲಿಗೆ ಹೆಗಲು ಕೊಟ್ಟು ನಮ್ಮ ಜೊತೆ ನಿಂತಿದ್ದೀರಿ. ಈ ಐತಿಹಾಸಿಕ ಸಂಬಂಧಗಳು ಯಾವಾಗಲೂ ನಮ್ಮ ನಡುವೆ ಹಾಗೇ ಇರುತ್ತವೆ ಅಂತ ನಾನು ನಂಬಿದ್ದೇನೆ ಅಂತ ಹೇಳಿದ್ದಾರೆ.
ಇನ್ನೊಂದ್‌ ಕಡೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯ ಈ ತಿಂಗಳ ಅಧ್ಯಕ್ಷತೆಯನ್ನ ರಷ್ಯಾ ವಹಿಸಿದೆ. ಈ ವೇಳೆ ರಷ್ಯಾದ ಮಾನವ ಹಕ್ಕುಗಳ ರಾಯಭಾರಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ UNSC ಸದಸ್ಯರನ್ನ ಉದ್ದೇಶಿಸಿ ಮಾತಾಡ್ತಿದ್ದಂತೆ ಅಮೆರಿಕ, ಬ್ರಿಟನ್‌, ಅಲ್ಬೇನಿಯಾ ಹಾಗೂ ಮಾಲ್ಟಾ ದೇಶಗಳು ಚರ್ಚೆಯಿಂದ ಹೊರ ನಡೆದಿವೆ. ಅಂದ್ಹಾಗೆ ಕಳೆದ ತಿಂಗಳು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ICC) ಯುಕ್ರೇನ್‌ ಯುದ್ಧ ಅಪರಾಧಳಿಗೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಮಕ್ಕಳ ಹಕ್ಕುಗಳ ರಾಯಭಾರಿ ಮರಿಯಾ ಬೆಲೊವಾ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿತ್ತು. ಈ ಹಿನ್ನೆಲೆ ಬೆಲೊವಾ ಅವರು ರಷ್ಯಾದಲ್ಲಿರೊ ಯುಕ್ರೇನ್ ಮಕ್ಕಳ ಬಗ್ಗೆ ಚರ್ಚಿಸೊ ಟೈಮಲ್ಲಿ ಅಮೆರಿಕ, ಬ್ರಿಟನ್‌ ಸೇರಿದಂತೆ ಕೆಲ ರಾಷ್ಟ್ರಗಳು ಡಿಸ್ಕಶನ್‌ನಿಂದ ಹೊರನಡೆದಿವೆ.

-masthmagaa.com

Contact Us for Advertisement

Leave a Reply