ಯುಕ್ರೇನ್‌ ವಾಯು ಪ್ರದೇಶ ಬಂಧ್‌… ಭಾರತದ ವಿಮಾನ ವಪಾಸ್

masthmagaa.com:

ರಷ್ಯಾ ಯುಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಬೆನ್ನಲ್ಲೇ ಯುಕ್ರೇನ್‌ ತನ್ನ ವಾಯುಪ್ರದೇಶವನ್ನ ನಾಗರಿಕ ವಿಮಾನಗಳಿಗೆ ಕ್ಲೋಸ್‌ ಮಾಡಿದೆ. ತನ್ನ ದೇಶಕ್ಕೆ ಬರುತ್ತಿದ್ದ ವಿಮಾನಗಳಿಗೆ NOTAM ಅಂದ್ರೆ ನೋಟಿಸ್‌ ಟು ಏರ್‌ಮನ್‌ ನೀಡಿರುವ ಯುಕ್ರೇನ್‌ ವಾಪಸ್ಸಾಗಲು ತಿಳಿಸಿದೆ. ಇದರಿಂದ ಯುಕ್ರೇನ್‌ನಲ್ಲಿರುವ ಭಾರತದ ಪ್ರಜೆಗಳನ್ನ ಕರೆದುಕೊಂಡು ಬರಲು ಹೋಗುತ್ತಿದ್ದ ಏರ್‌ಇಂಡಿಯಾದ ವಿಮಾನ ಮಾರ್ಗ ಮಧ್ಯದಿಂದಲೇ ದೆಹಲಿಗೆ ವಾಪಾಸ್ಸಾಗಿದೆ. ಈ ಕಾರಣದಿಂದ ತವರಿಗೆ ಮರಳಲು ಕಾಯುತ್ತಿದ್ದ ಸಾವಿರಾರು ಭಾರತೀಯರು ಯುಕ್ರೇನ್‌ನಲ್ಲಿಯೇ ಉಳಿಯುವಂತಾಗಿದೆ.
-ಆದ್ರೆ ಯುಕ್ರೇನ್‌ ನೋ ಫ್ಲೈ ಜೋನ್‌ ಅಂತ ಘೋಷಿಸುವ ಮೊದಲೇ ಕ್ವಿವ್‌ ಬಿಟ್ಟಿದ್ದ ಎರಡು ಏರ್‌ ಇಂಡಿಯಾ ವಿಶೇಷ ವಿಮಾನಗಳು ಇವತ್ತು ದೆಹಲಿಯನ್ನು ತಲುಪಿವೆ. 182 ಜನರನ್ನು ಕರೆತಂದ ವಿಮಾನ ಬೆಳಗ್ಗೆ 7:45 ಬಂದಿದೆ.
-ಇನ್ನು ಯುರೋಪಿಯನ್‌ ಯೂನಿಯನ್‌ ಏವಿಯೇಷನ್‌ ಸೇಫ್ಟಿ ಏಜೆನ್ಸಿ ಕೂಡ ಯುಕ್ರೇನ್‌ ಮೇಲೆ ಹಾರಾಟ ನಡೆಸದಂತೆ ಮತ್ತು ಬೆಲಾರಸ್‌-ಯುಕ್ರೆನ್‌, ರಷ್ಯಾ-ಯುಕ್ರೇನ್‌ ಗಡಿಯ 185 ಕಿ.ಮೀ ವ್ಯಾಪ್ತಿಯಲ್ಲಿ ಎಚ್ಚರಿಕೆಯಿಂದ ಇರುವಂತೆ ವಿಮಾನಗಳಿಗೆ ಸೂಚಿಸಿದೆ. ಮಿಲಿಟರಿ ಕಾರ್ಯಾಚರಣೆ ಸಮಯದಲ್ಲಿ ನಾಗರಿಕ ವಿಮಾನಗಳು ಹಾರುವುದು ತುಂಬಾ ಅಪಾಯಕಾರಿ, 2014ರಲ್ಲಿ ಯುಕ್ರೇನ್‌ ಮತ್ತು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ನಡುವಿನ ಕಾಳಗದಲ್ಲಿ 298 ಜನರು ಇದ್ದ ಮಲೇಷಿಯಾದ ವಿಮಾನವೊಂದನ್ನು ಹೊಡೆದುರಿಳಿಸಾಗಿತ್ತು.

-masthmagaa.com

Contact Us for Advertisement

Leave a Reply