ಯುಕ್ರೇನ್ ನಗರಗಳಲ್ಲಿ ಅಮಾನವೀಯ ಸ್ಥಿತಿ

masthmagaa.com:

ಯುಕ್ರೇನ್‌ನ ಕೆಲ ನಗರಗಳಲ್ಲಿ ಈಗ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಅಂತ ರಷ್ಯಾದ ಡಿಫೆನ್ಸ್‌ ಕಂಟ್ರೋಲ್‌ ಸೆಂಟರ್‌ ಮುಖ್ಯಸ್ಥ ಮಿಖಾಯಿ ಮಿಝಿಂತ್ಸೆವ್‌ ಹೇಳಿದ್ದಾರೆ. ಯುಕ್ರೇನ್​ನ ಹಲವಾರು ನಗರಗಳಲ್ಲಿ ಅಮಾನವೀಯ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಯುದ್ದದ ತೀವ್ರತೆ ಹೆಚ್ಚಾಗಿರುವ ಮಾರಿಯೋಪೋಲ್​​ನಲ್ಲೇ ಇನ್ನೂ ಲಕ್ಷಾಂತರ ಜನ ಸಿಲುಕಿದ್ದಾರೆ. ಅವರೆಲ್ಲಾ ತೀವ್ರ ಸಂಕಷ್ಟ ಎದುರಿಸ್ತಿದ್ದಾರೆ ಅಂತ ಹೇಳಿದ್ದಾರೆ. ಅಲ್ದೇ ರಷ್ಯಾ ಸೇನೆ ಸುಮಾರು 16 ದೇಶಗಳ 7 ಸಾವಿರ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಅವರೆಲ್ಲಾ ಸಿಟಿಗಳಿಂದ ಬರೋಕ್‌ ಸಾಧ್ಯವಾಗ್ದೇ ಅಲ್ಲೇ ಸಿಕ್ಕಾಕ್ಕೊಂಡಿದ್ದಾರೆ.. ಅಲ್ದೇ ಮಾರಿಯೋಪೋಲ್​​ನಲ್ಲೇ 50ಕ್ಕೂ ಹೆಚ್ಚು ವಿದೇಶಿ ಹಡಗುಗಳು ಅತಂತ್ರವಾಗಿ ನಿಂತಿವೆ ಅಂತ ರಷ್ಯಾ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply