ಇಸ್ರೇಲ್‌-ಹಮಾಸ್‌ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಜನರಲ್‌ ಅಸೆಂಬ್ಲಿಯಲ್ಲಿ ಭಾರೀ ಬೆಂಬಲ!

masthmagaa.com:

ಇಸ್ರೇಲ್‌-ಹಮಾಸ್‌ ಕದನ ವಿರಾಮ ಆಗ್ಬೇಕು ಅಂತ ಇದೀಗ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯಲ್ಲಿ ಬಹುಮತ ಸಿಕ್ಕಿದೆ. ಡಿಸೆಂಬರ್‌ 12 ರಂದು ನಡೆದ ಈ ಜನರಲ್‌ ಚುನಾವಣೆಯಲ್ಲಿ 193 ಸದಸ್ಯರ ಪೈಕಿ 153 ಸದಸ್ಯರು ಗಾಜಾ ಕದನ ವಿರಾಮದ ಪರ ವೋಟ್‌ ಹಾಕಿದ್ದಾರೆ. ವಿಶ್ವಸಂಸ್ಥೆ ಮುಂದಿಟ್ಟ ಈ ರೆಸೊಲ್ಯುಷನ್‌ ಪರ ಭಾರತ ಕೂಡ ವೋಟ್‌ ಹಾಕಿದೆ. ಈ ವೇಳೆ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಮಾನವೀಯ ಬಿಕ್ಕಟ್ಟಿನ ಬಗ್ಗೆ ಒತ್ತಿ ಹೇಳಿದ್ದಾರೆ. ಜೊತೆಗೆ ಇಸ್ರೇಲ್‌-ಹಮಾಸ್‌ ನಡುವೆ ಶಾಂತಿ ನೆಲೆಸೋ ವಿಚಾರದ ಪರ ಮಾತನಾಡಿದ್ದಾರೆ. ಇನ್ನು ಜನರಲ್‌ ಅಸೆಂಬ್ಲಿಯಲ್ಲಿ ನಡೆದ ವೋಟಿಂಗ್‌ನಲ್ಲಿ 153 ಸದಸ್ಯರು ರೆಸೊಲ್ಯುಷನ್‌ ಪರ ವೋಟ್‌ ಹಾಕಿದ್ರೆ, 10 ಸದಸ್ಯರು ಇದಕ್ಕೆ ವಿರುದ್ಧವಾಗಿ ವೋಟ್‌ ಹಾಕಿದ್ದಾರೆ. 23 ಸದಸ್ಯರು ವೋಟೇ ಹಾಕಿಲ್ಲ. ಅಮೆರಿಕ ಮತ್ತು ಇಸ್ರೇಲ್‌ ಈ ರೆಸೊಲ್ಯುಷನ್‌ ವಿರುದ್ಧ ವೋಟ್‌ ಹಾಕಿವೆ. ಅಂದ್ಹಾಗೆ ಅಕ್ಟೋಬರ್‌ 27 ರಂದು ಇದೇ ರೀತಿ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯಲ್ಲಿ ಇಸ್ರೇಲ್‌-ಹಮಸ್‌ ಕದನವಿರಾಮಕ್ಕೆ ಅರಬ್‌ ರಾಷ್ಟ್ರಗಳು ರೆಸೊಲ್ಯುಷನ್‌ನ್ನ ಮುಂದಿಟ್ಟಿದ್ವು. ಆಗ 120 ವೋಟ್‌ ಪರ, 14 ವೋಟ್‌ ವಿರುದ್ಧ ಮತ್ತು 45 ಸದಸ್ಯರು ವೋಟ್‌ ಹಾಕದೇ ಅಂತರ ಕಾಯ್ದುಕೊಂಡಿದ್ವು. ಕಳೆದ ಬಾರಿಯ ವೋಟಿಂಗ್‌ಗೆ ಹೋಲಿಸಿದ್ರೆ ಈ ಬಾರಿ ಕದನ ವಿರಾಮಕ್ಕೆ ಭಾರೀ ಬೆಂಬಲ ಸಿಕ್ಕಿದೆ.

ಇನ್ನೊಂದ್‌ ಕಡೆ ಇಸ್ರೇಲ್‌ ನಡೆಸ್ತಿರೋ ಉಗ್ರ ದಾಳಿಗೆ ಇದೀಗ ಅಮೆರಿಕ ಖಡಕ್‌ ವಾರ್ನಿಂಗ್‌ ನೀಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಇಸ್ರೇಲ್‌ ಮಿಲಿಟರಿಯ ಸ್ಟ್ರಾಟಜಿಗೆ ಎಚ್ಚರಿಕೆ ನೀಡಿದ್ದಾರೆ. ʻಈ ರೀತಿ ಬೇಕಾಬಿಟ್ಟಿ ದಾಳಿ ಮಾಡಿ, ನಾಗರಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡ್ತಿದ್ರೆ ಜಾಗತಿಕ ಬೆಂಬಲವನ್ನ ಕಳ್ಕೊಳ್ತೀರ. ಅಕ್ಟೋಬರ್‌ 7 ರಂದು ಯುದ್ಧ ಸ್ಟಾರ್ಟ್‌ ಆದಾಗ ಇಸ್ರೇಲ್‌ ಪರ ಜಾಗತಿಕ ಸಪೋರ್ಟ್‌ ಬಹಳ ಚೆನ್ನಾಗಿತ್ತು. ಆದ್ರೆ ಇದೀಗ ಇಸ್ರೇಲ್‌ ದಾಳಿ ತೀವ್ರಗೊಳಿಸಿರೋ ಕಾರಣ ಇವ್ರ ಮೇಲಿರೋ ಒಳ್ಳೆ ಅಭಿಪ್ರಾಯ ಕಡಿಮೆಯಾಗ್ತಿದೆʼ ಅಂತ ಹೇಳಿದ್ದಾರೆ. ಇನ್ನು ಇಸ್ರೇಲ್‌ ದಾಳಿಗೆ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಳ್ತಿರೋ ವಿಚಾರವಾಗಿ, ಈ ರೀತಿ ದಾಳಿ ಮಾಡ್ಬೇಡಿ. ನಾಗರಿಕರ ರಕ್ಷಣೆಯ ಬಗ್ಗೆ ಸ್ವಲ್ಪ ಗಮನ ಹರಿಸಿ ಅಂತ ಅಮೆರಿಕ ಎಚ್ಚರಿಕೆ ನೀಡ್ತಲೇ ಬಂದಿದೆ.

ಇತ್ತ ಹಮಾಸ್‌ ವಿರುದ್ಧ ಜಲ ಯುದ್ಧ ನಡೆಸೋಕೆ, ಹಮಾಸ್‌ ಟನಲ್‌ ಒಳಗೆ ನೀರು ಪಂಪ್‌ ಮಾಡೋ ಇಸ್ರೇಲ್‌ನ ಪ್ಲಾನ್‌ ಇದೀಗ ಆ್ಯಕ್ಷನ್‌ಗೆ ಬಂದಿದೆ. ಗಾಜಾದಲ್ಲಿರೋ ಹಮಾಸ್‌ ಟನಲ್‌ ಕಾಂಪ್ಲೆಕ್ಸ್‌ ಒಳಗಡೆ ನಿಧಾನವಾಗಿ ನೀರು ಪಂಪ್‌ ಮಾಡೋ ಕೆಲಸವನ್ನ ಇಸ್ರೇಲ್‌ ಸೇನೆ ಶುರುಹಚ್ಕೊಂಡಿದೆ ಅಂತ ಅಮೆರಿಕದ ವಾಲ್‌ ಸ್ಟ್ರೀಟ್‌ ಜನರಲ್‌ ರಿಪೋರ್ಟ್‌ ಮಾಡಿದೆ. ಇಸ್ರೇಲ್‌ ಲಿಮಿಟೆಡ್‌ ಆಗಿ ಈ ರೀತಿ ನೀರನ್ನ ಪಂಪ್‌ ಮಾಡ್ತಿದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಹಮಾಸ್‌ ಟನಲ್‌ ಒಳಗೆ ನೀರು ನುಗ್ಗಿಸುವಂತ ಈ ಹೊಸ ಸ್ಟ್ರಾಟಜಿ, ಬೇರೆ ಟೆಕ್ನಿಕ್‌ಗಳಿಗೆ ಹೋಲಿಸಿದ್ರೆ ಎಷ್ಟು ಪರಿಣಾಮಕಾರಿಯಾಗಿದೆ ಅಂತ ಇಸ್ರೇಲ್ ಸದ್ಯ ಲೆಕ್ಕಚಾರ ಹಾಕ್ತಿದೆ. ಈ ಬಗ್ಗೆ ಇಸ್ರೇಲ್‌ನ ರಕ್ಷಣಾ ಪಡೆಗಳು ಯಾವ್ದೇ ರೀತಿ ಪಬ್ಲಿಕ್‌ನಲ್ಲಿ ಹೇಳಿಕೊಂಡಿಲ್ಲ. ಆದ್ರೆ ಅಮೆರಿಕ ಅಧಿಕಾರಿಗಳು ಇದನ್ನ ಕನ್ಫರ್ಮ್‌ ಮಾಡಿದ್ದಾರೆ ಅಂತ ವರದಿಯಲ್ಲಿ ಹೇಳಲಾಗಿದೆ. ಹಮಾಸ್‌ರನ್ನ ಸದೆಬಡಿಯೋಕೆ ಈ ಹೊಸ ಟೆಕ್ನಿಕ್‌ ಬಗ್ಗೆ ಇಸ್ರೇಲ್‌ ಅಮೆರಿಕ ಬಳಿ ಈ ಹಿಂದೆ ಹೇಳಿಕೊಂಡಿತ್ತು. ಆಗ ಬೈಡನ್‌ನ ಆಡಳಿತದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ವು. ಈ ರೀತಿ ಮಾಡೋದ್ರಿಂದ ಸುತ್ತಮುತ್ತಲ ಪರಿಸರದ ಮೇಲೆ ಹಾನಿ ಉಂಟಾಗ್ಬೋದು ಅಂತ ಕೆಲವರು ಕಳವಳ ವ್ಯಕ್ತಪಡಿಸಿದ್ರು. ಯಾಕಂದ್ರೆ, 2015ರಲ್ಲಿ ಸ್ಮಗ್ಲಿಂಗ್‌ ಚಟುವಟಿಕೆಗಳನ್ನ ತಡೆಯೋಕೆ ಈಜಿಪ್ಟ್‌ ಇದೇ ರೀತಿಯ ಟೆಕ್ನಿಕ್‌ ಬಳಸಿತ್ತು. ಪರಿಣಾಮ ಅಲ್ಲಿನ ಮನೆ, ಬೆಳೆಗಳಿಗೆಲ್ಲಾ ಡ್ಯಾಮೇಜ್‌ ಆಗಿತ್ತು. ಜೊತೆಗೆ ಅಲ್ಲಿನ ನೀರು ಕೂಡ ಕಲುಷಿತಗೊಂಡಿತ್ತು. ಇದೀಗ ಅದೇ ಟೆಕ್ನಿಕ್‌ ಬಳಸೋಕೆ ಇಸ್ರೇಲ್‌ ಮುಂದಾಗಿದೆ.

-masthmagaa.com

Contact Us for Advertisement

Leave a Reply