ತಾಲಿಬಾನ್ ವಿಚಾರದಲ್ಲಿ ಬದಲಾಯ್ತಾ ವಿಶ್ವಸಂಸ್ಥೆ ನಿಲುವು?

masthmagaa.com:

ತಾಲಿಬಾನಿಗಳ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಲುವು ಬದಲಾಯ್ತಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಕಾಬೂಲ್ ಏರ್​ಪೋರ್ಟ್ ಮೇಲೆ ನಡೆದ ದಾಳಿ ಸಂಬಂಧ ಬಿಡುಗಡೆ ಮಾಡಿರೋ ಹೇಳಿಕೆಯಲ್ಲಿ ತಾಲಿಬಾನಿಗಳ ಹೆಸರೇ ಮಾಯವಾಗಿದೆ. ಅಫ್ಘಾನಿಸ್ತಾನದ ಯಾವುದೇ ಗುಂಪು ಉಗ್ರರಿಗೆ ಬೆಂಬಲ ನೀಡಬಾರದು ಅಂತ ಹೇಳಲಾಗಿದೆ. ಅದೇ ಈ ಹಿಂದೆ ಅಂದ್ರೆ ಆಗಸ್ಟ್ 16ರಂದು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ತಾಲಿಬಾನ್ ಆಗಲೀ, ಅಫ್ಘಾನಿಸ್ತಾನದ ಬೇರೆ ಯಾವುದೇ ಗುಂಪಾಗಲೀ ಭಯೋತ್ಪಾದನೆಗೆ ಬೆಂಬಲ ನೀಡಬಾರದು ಅಂತ ಹೇಳಲಾಗಿತ್ತು. ಆದ್ರೆ ಈ ಸಲ ತಾಲಿಬಾನಿಗಳ ಹೆಸರು ಉಲ್ಲೇಖಿಸಿಲ್ಲ.

-masthmagaa.com

Contact Us for Advertisement

Leave a Reply