ಜಮ್ಮು ಕಾಶ್ಮೀರಕ್ಕೆ ಜನರನ್ನು ಆಕರ್ಷಿಸಲು ಸರ್ಕಾರ ಹೊಸ ಪ್ಲಾನ್!

masthmagaa.com:

ಒಂದ್ಕಡೆ ಉಗ್ರರು ನಾಗರಿಕರನ್ನ ಟಾರ್ಗೆಟ್​​​ ಮಾಡ್ತಿದ್ರೆ, ಮತ್ತೊಂದುಕಡೆ ಜಮ್ಮು ಕಾಶ್ಮೀರದತ್ತ ಜನರನ್ನ ಆಕರ್ಷಿಸಲು, ಈಗಾಗಲೇ ಇರೋ ಜನ ಜಮ್ಮು ಕಾಶ್ಮೀರ ಬಿಟ್ಟು ಹೋಗದಂತೆ ಮಾಡಲು ಸರ್ಕಾರ ನಾನಾ ಕ್ರಮಗಳನ್ನ ಕೈಗೊಳ್ತಿದೆ. ಇವತ್ತು ಜಮ್ಮು ಕಾಶ್ಮೀರ ಅಡ್ಮಿನಿಷ್ಟ್ರೇಷನ್​ ಗವರ್ನಮೆಂಟ್​ ಆಫ್​ ದುಬೈ ಜೊತೆ ಎಮ್​ಒಯು ಅಥವಾ ಮೆಮೊರಂಡಮ್​ ಆಫ್​ ಅಂಡರ್​​ಸ್ಟಾಂಡಿಂಗ್​ಗೆ ಸಹಿ ಹಾಕಿದೆ. ಜಮ್ಮು ಕಾಶ್ಮೀರದಲ್ಲಿ ರಿಯಲ್ ಎಸ್ಟೇಟ್​​ ಡೆವಲಪ್​ಮೆಂಟ್​, ಇಂಡಸ್ಟ್ರೀಯಲ್ ಪಾರ್ಕ್ಸ್​, ಐಟಿ ಟವರ್ಸ್, ಮಲ್ಟಿಪರ್ಪಸ್​ ಟವರ್ಸ್, ಲಾಜಿಸ್ಟಿಕ್ಸ್, ಮೆಡಿಕಲ್ ಕಾಲೇಜ್​, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಬಂಧಿಸಿದ ಎಮ್​ಒಯು ಇದಾಗಿದೆ.

-masthmagaa.com

Contact Us for Advertisement

Leave a Reply