ಅಮಿತ್ ಶಾ ಎರಡು ತಿಂಗಳಲ್ಲಿ 3 ಬಾರಿ ಆಸ್ಪತ್ರೆಗೆ ಅಡ್ಮಿಟ್, 3 ಬಾರಿ ಡಿಸ್ಚಾರ್ಜ್​

masthmagaa.com:

ಕೊರೋನಾ ಸೋಂಕು ತಗುಲಿ ಗುಣಮುಖರಾದ ಬಳಿಕ ಎರಡನೇ ಸಲ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾದಿಂದ ಗುಣಮುಖರಾದ ಬಳಿಕ ಅವರಿಗೆ ಆಯಾಸ, ಮೈ-ಕೈ ನೋವು, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.

ಅಂದ್ಹಾಗೆ ಆಗಸ್ಟ್​ 2ರಂದು ಅಮಿತ್ ಶಾಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಆಗಸ್ಟ್​ 14ರಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ನಂತರ ಆಯಾಸ, ಮೈ-ಕೈ ನೋವು ಕಾಣಿಸಿಕೊಂಡ ಹಿನ್ನೆಲೆ ಆಗಸ್ಟ್​ 18ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಆಗಸ್ಟ್​ 30ರಂದು ಡಿಸ್ಚಾರ್ಜ್ ಆಗಿದ್ದರು. ಬಳಿಕ ಸೆಪ್ಟೆಂಬರ್ 12ರಂದು ಮತ್ತೆ ಏಮ್ಸ್​ಗೆ ದಾಖಲಾಗಿದ್ದ ಅವರು ಇಂದು ಸಂಜೆ 5 ಗಂಟೆಗೆ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಎರಡು ತಿಂಗಳಲ್ಲಿ ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿ ಮೂರು ಬಾರಿ ಡಿಸ್ಚಾರ್ಜ್ ಆದಂತಾಗಿದೆ. ಸದ್ಯ ನಡೆಯುತ್ತಿರುವ ಸಂಸತ್ ಮುಂಗಾರು ಅಧಿವೇಶನದಲ್ಲಿ ಅಮಿತ್ ಶಾ ಭಾಗವಹಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕು.

-masthmagaa.com

Contact Us for Advertisement

Leave a Reply