ಅಮೆರಿಕದಲ್ಲಿ ಮತ್ತೆ ಸದ್ದು ಮಾಡಿದ ಸಾಮೂಹಿಕ ಗುಂಡಿನ ದಾಳಿ

masthmagaa.com:

ಅಮೆರಿಕಕ್ಕೂ ಈ ಮಾಸ್​ ಶೂಟಿಂಗ್​ಗೂ ಅದೇನೋ ಸಂಬಂಧ. ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ ಪರಿಣಾಮ ಅಷ್ಟು ಜನ ಪ್ರಾಣ ಕಳ್ಕೊಂಡ್ರು, ಇಷ್ಟು ಜನ ಪ್ರಾಣ ಕಳ್ಕೊಂಡ್ರು ಅಂತ ಅಮೆರಿಕದಿಂದ ಆಗಾಗ ಸುದ್ದಿ ಬರ್ತಾ ಇರುತ್ತೆ. ಇದೀಗ ಅಮೆರಿಕದ ಟೆಕ್ಸಾಸ್ ರಾಜ್ಯದ ಬ್ರ್ಯಾನ್ ನಗರದಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಇದರ ಪರಿಣಾಮ ಒಬ್ಬರು ಮೃತಪಟ್ಟಿದ್ದು, 6 ಜನ ಗಾಯಗೊಂಡಿದ್ದಾರೆ. ಸದ್ಯ ಬಂದೂಕುಧಾರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೂ ಕೆಲವೇ ಗಂಟೆಗಳು ಮೊದಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅಮೆರಿಕದ ಅಟಾರ್ನಿ ಜನರಲ್ ಮೆರಿಕ್​ ಗಾರ್ಲ್ಯಾಂಡ್​ ಅಮೆರಿಕದಲ್ಲಿ ಗನ್​ ನಿಯಂತ್ರಣಕ್ಕೆ ಕೆಲವೊಂದು ನಿಯಮಗಳನ್ನ ಘೋಷಣೆ ಮಾಡಿದ್ರು.

-masthmagaa.com

Contact Us for Advertisement

Leave a Reply