ಹಂತ ಹಂತವಾಗಿ ಲಾಕ್​ಡೌನ್ ಸಡಿಲ ಮಾಡಿದ್ರೆ ಏನೂ ಆಗಲ್ಲ!

masthmagaa.com:

ಕೊರೋನಾ ಸೋಂಕಿನ ಎರಡನೇ ಅಲೆ ಕಂಟ್ರೋಲ್ ಮಾಡಲು ವಿವಿಧ ರಾಜ್ಯಗಳಲ್ಲಿ ಲಾಕ್​ಡೌನ್ ಜಾರಿ ಮಾಡಲಾಗಿದೆ. ಈಗ ಕೇಸಸ್​ ಕೂಡ ಕಮ್ಮಿಯಾಗ್ತಿರೋದ್ರಿಂದ ಕೆಲವೊಂದು ರಾಜ್ಯಗಳು ಲಾಕ್​ಡೌನ್​ ಸಡಿಲ ಮಾಡಲು ಚಿಂತನೆ ನಡೆಸುತ್ತಿವೆ. ಆದ್ರೆ ಲಾಕ್​ಡೌನ್ ಓಪನ್ ಮಾಡಿದ್ರೆ ಎಲ್ಲಿ ಕೊರೋನಾ ಮತ್ತೆ ಮೇಲಕ್ಕೆ ಏಳುತ್ತೆ ಅನ್ನೋ ಭಯ, ಅನುಮಾನ ಎಲ್ಲರಿಗೂ ಇದೆ. ಈ ಬಗ್ಗೆ ಇವತ್ತು ಮಾತನಾಡಿರೋ ಐಸಿಎಂಆರ್ ಪ್ರಧಾನ ನಿರ್ದೇಶಕ ಬಲ್ರಾಮ್ ಭಾರ್ಗವ, ಹಂತ ಹಂತವಾಗಿ ಲಾಕ್​ಡೌನ್ ಸಡಿಲ ಮಾಡೋದ್ರಿಂದ ಕೊರೋನಾ ಭಾರಿ ಏರಿಕೆ ಕಾಣೋದಿಲ್ಲ. ಆದ್ರೂ ಲಸಿಕೆ ಅಭಿಯಾನಕ್ಕೆ ಮೊದಲ ಆದ್ಯತೆ ಕೊಡಬೇಕು. ಜೊತೆಗೆ ಮಾಸ್ಕ್ ಹಾಕೋದು, ಸಾಮಾಜಿಕ ಅಂತರ ಕಾಪಾಡೋದು ಸೇರಿದಂತೆ ಅಪ್ರೋಪ್ರಿಯೇಟ್​ ಬಿಹೇವಿಯರ್ ಅನ್ನ ಫಾಲೋ ಮಾಡ್ಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply